ಬದಿಯಡ್ಕ: ಜನಸೇವಾ ವಿಶ್ವಸ್ಥ ನಿಧಿ ಆಶ್ರಯ ಆಶ್ರಮ ಕನ್ನೆಪ್ಪಾಡಿಯಲ್ಲಿ ಶಾರದಾ ಮಹಿಳಾ ಮಂಡಳಿ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತಾಚರಣೆಯನ್ನು ನಡೆಸಲಾಯಿತು. ನಿವೃತ್ತ ಅಧ್ಯಾಪಿಕೆ ಕವಿತ ಎಸ್ ವರಮಹಾಲಕ್ಷ್ಮಿ ವ್ರತಾಚರಣೆಯ ಮಹತ್ವವನ್ನು ತಿಳಿಸಿದರು. ರಾಮಕೃಷ್ಣ ಹೆಬ್ಬಾರ್ ಪೂಜಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಾತೆಯರು ಮತ್ತು ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ಶಾರದಾ ಶಿಶುಮಂದಿರದ ಪುಟಾಣಿಗಳು, ಮಾತೆಯರು, ಪ್ರಿಯಾಂಕ ಕುಟುಂಬಶ್ರೀ ಸದಸ್ಯರು, ಟ್ರಸ್ಟಿಗಳಾದ ಸವಿತಾ ಟೀಚರ್, ಶಿವಶಂಕರ್ ಭಟ್ ಗುಣಾಜೆ, ಗಣಪತಿ ಪ್ರಸಾದ್ ಕುಳವರ್ಮ, ರಮೇಶ ಕಳೇರಿ, ಬಾಲಗೋಪಾಲ, ಬಾಲಕೃಷ್ಣ ಉಪಸ್ಥಿತರಿದ್ದರು. ಭಾರತಿ ವಂದಿಸಿದರು.