ಕಾಸರಗೋಡು: ವಿಕಲಚೇತನರಿಗಾಗಿ ಸಾಮಾಜಿಕ ನ್ಯಾಯ ಇಲಾಖೆ ಜಾರಿಗೊಳಿಸಿರುವ ಸಾಮಾಜಿಕ ಭದ್ರತಾ ಯೋಜನೆಗಳ ಪರಿಷ್ಕøತ ನಿಯಮಾವಳಿ ಜಾರಿಗೆ ತರಲಾಗಿದೆ. ಆರ್ಥಿಕ ಅನನುಕೂಲತೆಯಿಂದ ಬಳಲುತ್ತಿರುವ ವಿಕಲಚೇತನ ಪೆÇೀಷಕರ ಮಕ್ಕಳಿಗೆ ವಿದ್ಯಾಕಿರಣ ಯೋಜನೆಯನ್ವಯ ಶೈಕ್ಷಣಿಕ ವಿದ್ಯಾರ್ಥಿವೇತನ ಯೋಜನೆ ಎರಡು ಮಕ್ಕಳಿಗೆ ಮಾತ್ರ ಸೀಮಿತವಾಗಿರುವ ನಿಬಂಧನೆಯನ್ನು ಹೊರತುಪಡಿಸಲಾಗಿದೆ.
ಈ ವರ್ಷದಿಂದ ಎಲ್ಲಾ ವಿಕಲಚೇತನ ಮಕ್ಕಳು ವಿದ್ಯಾಕಿರಣಂ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಸರ್ಕಾರಿ, ಅನುದಾನಿತ ವಿದ್ಯಸಂಸ್ಥೆಗಳ ಹೊರತಾಗಿ, ಸ್ವಾಶ್ರಯ ಸಂಸ್ಥೆಗಳು ಸಹ ವಿದ್ಯಾರ್ಥಿವೇತನಕ್ಕೆ ಅರ್ಹವಾಗಿರುತ್ತವೆ. ವಿಕಲಾಂಗ ತಾಯಂದಿರಿಗೆ ಪ್ರಸವಾನಂತರದಮಕ್ಕಳ ಆರೈಕೆಗಾಗಿ ಆರ್ಥಿಕ ಯೋಜನೆಯಾದ ಮಾತೃಜ್ಯೋತಿಯಲ್ಲಿ ಶೇಕಡಾ 60 ರಷ್ಟು ಅಥವಾ ಅದಕ್ಕಿಂತ ಹೆಚ್ಚು ವಿಕಲಚೇತನರು ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಅಂಗವಿಕಲರ ಶೇಕಡಾವಾರು ಪ್ರಮಾಣವನ್ನು ಕ್ರೋಢೀಕರಿಸಿ, ಬದಲಾಯಿಸಲಾಗಿದೆ. ಪ್ರಸಕ್ತ ವಿವಿಧ ಅಂಗವೈಕಲ್ಯಗಳನ್ನು ವಿವಿಧ ಹಂತಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸ್ವಾಶ್ರಯ, ತುರ್ತು ಸಂದರ್ಭಗಳಲ್ಲಿ ವಿಕಲಚೇತನರಿಗೆ ವೈದ್ಯಕೀಯ ಆರ್ಥಿಕ ನೆರವು ನೀಡುವ ಯೋಜನೆ, ತುರ್ತು ಸಂದರ್ಭಗಳಲ್ಲಿ ತಜ್ಞರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿನ ವೆಚ್ಚಗಳಿಗೆ ಹಣವನ್ನು ಒದಗಿಸಲಾಗುತ್ತದೆ. ಅಲ್ಲದೆ, ತೀವ್ರ ಅಂಗವೈಕಲ್ಯ ಹೊಂದಿರುವವರು ಮತ್ತು ಮನೆಯ ಹೊರಗೆ ಹೋಗಿ ಕೆಲಸ ಮಾಡಲು ಸಾಧ್ಯವಾಗದ ಅಂಗವಿಕಲರು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಸಾಮಾಜಿಕ ನ್ಯಾಯ ಇಲಾಖೆಯ ವೆಬ್‍ಸೈಟ್ www.suneethi.sjd.kerala.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04994255074)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.