ಮಾಲೆ: 'ದೇಶದಲ್ಲಿ ಆರ್ಥಿಕ ಅಸ್ಥಿರತೆ ಸೃಷ್ಟಿಸಲು ಉದ್ದೇಶಿಸಿರುವವರನ್ನು ಪತ್ತೆಮಾಡಲು ಕಾರ್ಯಪ್ರವೃತ್ತರಾಗಿದ್ದೇವೆ' ಎಂದು ಮಾಲ್ಡೀವ್ಸ್ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಾಲೆ: 'ದೇಶದಲ್ಲಿ ಆರ್ಥಿಕ ಅಸ್ಥಿರತೆ ಸೃಷ್ಟಿಸಲು ಉದ್ದೇಶಿಸಿರುವವರನ್ನು ಪತ್ತೆಮಾಡಲು ಕಾರ್ಯಪ್ರವೃತ್ತರಾಗಿದ್ದೇವೆ' ಎಂದು ಮಾಲ್ಡೀವ್ಸ್ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಸರ್ಕಾರವನ್ನು ಕೆಡವಲು ವಿರೋಧ ಪಕ್ಷಗಳು ಸಂಚು ರೂಪಿಸಿವೆ ಎಂದು ಎರಡು ದಿನಗಳ ಹಿಂದಷ್ಟೇ ಅಧ್ಯಕ್ಷ ಮೊಹಮ್ಮದ್ ಮೊಯಿಜು ಅವರು ಹೇಳಿದ್ದರು.
ಮಾಲ್ದೀವ್ಸ್‌ನ ಜನರು ತಮ್ಮ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳಿಂದ ವಿದೇಶಿ ವಹಿವಾಟು ನಡೆಸದಂತೆ ದೇಶದ ಕೇಂದ್ರೀಯ ಬ್ಯಾಂಕ್ 'ಬ್ಯಾಂಕ್ ಆಫ್ ಮಾಲ್ದೀವ್ಸ್' ಭಾನುವಾರ ನಿರ್ಬಂಧ ಹೇರಿತ್ತು. ಹೊಸದಾಗಿ ನೀಡುವ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳಿಗೂ ವಿದೇಶಿ ವಹಿವಾಟು ನಿರ್ಬಂಧಿಸಲಾಗಿತ್ತು.
ನಿರ್ಬಂಧ ಹೇರಿದ ಕೆಲವೇ ಗಂಟೆಗಳಲ್ಲಿಯೇ ಕೇಂದ್ರೀಯ ಬ್ಯಾಂಕ್ ನಿರ್ಬಂಧವನ್ನು ತೆರವು ಮಾಡಿತು. ಮಾಲ್ದೀವ್ಸ್ ಹಣಕಾಸು ಪ್ರಾಧಿಕಾರದ (ಎಂಎಂಎ) ನಿರ್ದೇಶನದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅದು ಹೇಳಿತ್ತು.
'ವಿದೇಶಿ ವಹಿವಾಟು ನಿರ್ಬಂಧದಿಂದ ದೇಶದಲ್ಲಿ ಆರ್ಥಿಕ ಅಸ್ಥಿರತೆ ಉಂಟಾಗಲಿದೆ ಎಂದು ಭಯ ಹುಟ್ಟಿಸಿ, ಜನರು ಬೀದಿಗಿಳಿಯುವಂತೆ ಮಾಡಿ, ಸರ್ಕಾರವನ್ನು ಬೀಳಿಸಲು ಕೆಲವು ಉದ್ದೇಶಿಸಿದ್ದಾರೆ. ಇವರನ್ನು ಪತ್ತೆ ಮಾಡಲಾಗುವುದು' ಎಂದು ಪೊಲೀಸರು ಸೋಮವಾರ ಹೇಳಿದ್ದರು.