ಉಪ್ಪಳ: ಕೊಂಡೆವೂರು ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 21 ನೇ ವರ್ಷದ ಚಾತುರ್ಮಾಸ್ಯ ವೃತಾಚರಣೆಯ ಪ್ರಯುಕ್ತ ಕೊಂಡೆವೂರು ಮಠದ ಶ್ರೀ ಗಾಯತ್ರೀ ಮಂಟಪದಲ್ಲಿ ಭಾನುವಾರ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ವಿದ್ವಾನ್ ಸುಬ್ರಹ್ಮಣ್ಯ ಅವಧಾನಿಗಳು, ಗುಂಡಿಬೈಲು, ಉಡುಪಿ ಇವರು 'ನವಧಾ ಭಕ್ತಿ' ಯ ಬಗ್ಗೆ ಮಹಾಭಾರತ, ರಾಮಾಯಣಗಳನ್ನು ಉಲ್ಲೇಖಿಸುತ್ತಾ ಧಾರ್ಮಿಕ ಉಪನ್ಯಾಸ ನೀಡಿದರು. ಯಾವುದೇ ಫಲಾಪೇಕ್ಷೆ ಇಲ್ಲದೆ ದೇವರನ್ನು ಪೂಜಿಸುವ ನವಧಾ ಭಕ್ತಿಗಳಾದ ಶ್ರವಣಂ, ಸ್ಮರಣಂ, ಕೀರ್ತನಂ, ಅರ್ಚನಂ, ಪಾದಸೇವನ, ವಂದನಂ, ದಾಸ್ಯಂ, ಸಖ್ಯಂ, ಆತ್ಮನಿವೇದನ ಮುಂತಾದುವುಗಳನ್ನು ಸವಿವರವಾಗಿ ಜನರಿಗೆ ಮನಮುಟ್ಟುವಂತೆ ತಿಳಿಸಿದರು.