ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬ್ರಿಟಿಷ್ ಪ್ರಜೆಯಾಗಿದ್ದು, ಬ್ರಿಟನ್ ಸರ್ಕಾರಕ್ಕೆ ವಾರ್ಷಿಕ ರಿಟರ್ನ್ ಸಲ್ಲಿಸಿದ್ದಾರೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬ್ರಿಟಿಷ್ ಪ್ರಜೆಯಾಗಿದ್ದು, ಬ್ರಿಟನ್ ಸರ್ಕಾರಕ್ಕೆ ವಾರ್ಷಿಕ ರಿಟರ್ನ್ ಸಲ್ಲಿಸಿದ್ದಾರೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಅವರು ಬಿಜೆಪಿಯ ಭಾಗವಾಗಿದ್ದರೂ ಆಗಾಗ್ಗೆ ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಈಚೆಗೆ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಟೈಟಾನಿಕ್ ಹಡಗಿನಂತೆ ಮುಳುಗಲಿದೆ ಎಂದು ಸ್ವಾಮಿ ಟೀಕಿಸಿದ್ದರು.
ಬಾಂಗ್ಲಾದೇಶದ ಅಶಾಂತಿಯ ಬಗ್ಗೆ ಮೋದಿಯನ್ನು ಗುರಿಯಾಗಿಸಿದ್ದ ಸ್ವಾಮಿ, 'ಮುಸ್ಲಿಮರು ಬಾಂಗ್ಲಾದೇಶದ ಲೇಡಿ ಪ್ರಧಾನಮಂತ್ರಿಯನ್ನು (ಶೇಖ್ ಹಸೀನಾ) ಹೊರಹಾಕಿದಾಗ ಮೋದಿ ನಡುಗುತ್ತಿದ್ದಾರೆ' ಎಂದು 'ಎಕ್ಸ್'ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮೋದಿ ಯಾವಾಗ ಬೇಕಿದ್ದರೂ ಕೈಕೊಡಬಹುದು ಎಂದು ಸ್ವಾಮಿ ವ್ಯಂಗ್ಯವಾಡಿದ್ದರು.
ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ: ಸ್ವಾಮಿ ಆರೋಪ'ಯಾವ ದೇಶದ ಪ್ರಜೆ ತಿಳಿಸಿ' ರಾಹುಲ್‌ಗೆ ಕೇಂದ್ರದ ನೋಟಿಸ್