ಪೆರ್ಲ: ಶ್ರೀ ಸತ್ಯನಾರಾಯಣ ಪ್ರೌಢಶಾಲಾ 2024 -25ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ಮಹಾ ಸಭೆ ಶಾಲಾ ಗ್ರಂಥಾಲಯ ಸಭಾಂಗಣದಲ್ಲಿ ಜರುಗಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಬಿ.ಎಂ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಉಪಾಧ್ಯಕ್ಷ ಸದಾಶಿವ ಭಟ್, ಪಿಟಿಎ ಉಪಾಧ್ಯಕ್ಷ ನಾರಾಯಣ ನಾಯಕ್, ಮದರ್ ಪಿಟಿಎ ಅಧ್ಯಕ್ಷ ಜ್ಯೋತಿಲಕ್ಷ್ಮೀ ಉಪಸ್ಥಿತರಿದ್ದರು.
ಈ ಸಂದರ್ಭ ಶಾಲೆಗೆ ಎಂಆರ್‍ಪಿಎಲ್‍ನಿಂದ ಕೊಡುಗೆಯಾಗಿ ಲಭಿಸಿದ ಸುಸಜ್ಜಿತ ಶೌಚಗೃಹ ಹಾಗೂ ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೆರವಿನೊಂದಿಗೆ ನಿರ್ಮಿಸಲಾಗಿರುವ ನೂತಕ ಕಟ್ಟಡದ ಉದ್ಘಾಟನೆ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ಈ ಸಂದರ್ಭ ಶಾಲಾ ರಕ್ಷಕ ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ನಾರಾಯಣ ನಾಯಕ್ ನಲ್ಕ, ಉಪಾಧ್ಯಕ್ಷರಾಗಿ ಪುರುಶೋತ್ತಮ ಬಿ ಎಮ್, ಮದರ್ ಪಿ ಟಿ ಎ ಅಧ್ಯಕ್ಷೆಯಾಗಿ ಜ್ಯೋತಿಲಕ್ಷೀ, ಸದಸ್ಯರಾಗಿ ಸದಾನಂದ, ಹಮೀದ್ ಕುರಡ್ಕ, ಕುಸುಮಾವತಿ, ವೀಣಾ ಸರಸ್ವತಿ, ಸಹನಾರಘುರಾಮ್ ಆಯ್ಕೆಯಾದರು. ಶಾಲಾ ಮುಖ್ಯ ಶಿಕ್ಷಕ ಎನ್. ಕೇಶವ ಪ್ರಕಾಶ್ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಅಧ್ಯಾಪಕ ಎಸ್ ವೇಣುಗೋಪಾಲ ಸ್ವಾಗತಿಸಿದರು. ಎಸ್ ಕೃಷ್ಣಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣರಾಜ ಜಿ ವಂದಿಸಿದರು.