ಕೊಚ್ಚಿ: ಸಿನಿಮಾರಂಗದ ಮಹಿಳೆಯರ ಸಮಸ್ಯೆಗಳ ಅಧ್ಯಯನಕ್ಕೆ ನೇಮಿಸಿರುವ ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಬಿಡುಗಡೆ ವಿರೋಧಿಸಿ ನಟಿ ರಂಜಿನಿ ಅವರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯನ್ನು ಸರ್ಕಾರ ಇಂದು(ಶನಿವಾರ) ಬಿಡುಗಡೆ ಮಾಡಲಿರುವಾಗ ನಟಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ವರದಿಯನ್ನು ಬಿಡುಗಡೆ ಮಾಡುವಾಗ ಯಾವುದೇ ಗೌಪ್ಯತೆಯ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ನಟಿ ಮನವಿ ಮಾಡಿದ್ದಾರೆ. .
ಹೇಮಾ ಸಮಿತಿ ಮುಂದೆ ಹೇಳಿಕೆ ನೀಡಿದ್ದೇನೆ ಎಂದು ರಂಜಿನಿ ಹೇಳಿದ್ದಾರೆ. ಈ ಅರ್ಜಿಯನ್ನು ಹೈಕೋರ್ಟ್ ಸೋಮವಾರ ಪರಿಗಣಿಸಲಿದ್ದು, ಹೇಳಿಕೆ ನೀಡಿದವರಿಗೆ ತಿಳಿಯದೆ ವರದಿಯನ್ನು ಬಿಡುಗಡೆ ಮಾಡದಂತೆ ಮನವಿ ಮಾಡಿದೆ.
ಹೇಳಿಕೆ ನೀಡಿದ ನಂತರ ಹೇಮಾ ಸಮಿತಿಯ ತನ್ನನ್ನು ಇದುವರೆಗೂ ಸಂಪರ್ಕಿಸಿಲ್ಲ. ವಿಷಯಗಳು ಹೇಗೆ ಹೊರಬರುತ್ತವೆ ಎಂಬ ಆತಂಕವಿದೆ. ಹೇಳಿಕೆ ನೀಡಿದವರಿಗೆ ಪ್ರತಿ ನೀಡಿ ಅವರಿಗೂ ಮನವರಿಕೆ ಮಾಡಿಕೊಡುವ ಮೂಲಕ ವರದಿ ಬಿಡುಗಡೆ ಮಾಡಬೇಕು ಎಂದು ರಂಜಿನಿ ಹೇಳಿದರು.
ಹೇಮಾ ಸಮಿತಿಯು ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು, ನ್ಯಾಯ ನಿರಾಕರಣೆ ಮತ್ತು ಕೆಲಸದ ಪರಿಸ್ಥಿತಿಗಳ ಅಧ್ಯಯನಕ್ಕಾಗಿ ರಚಿಸಲಾದ ಆಯೋಗವಾಗಿದೆ. ಚಿತ್ರರಂಗದ ಮಹಿಳಾ ಸಂಘಟನೆಯಾದ ವುಮೆನ್ ಇನ್ ಸಿನಿಮಾ ಕಲೆಕ್ಟಿವ್ ಸಲ್ಲಿಸಿದ ಮನವಿಯ ಮೇರೆಗೆ ಸಮಿತಿಯನ್ನು ರಚಿಸಲಾಗಿತ್ತು.