ಬದಿಯಡ್ಕ: ಪೆರಡಾಲ ಶ್ರೀ ವರದಾ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಶ್ರೀ ಕ್ಷೇತ್ರ ಪೆರಡಾಲ ಪರಿಸರದಲ್ಲಿ ವಿವಿಧ ಸಾಂಸ್ಕøತಿಕ ಆಟೋಟ ಸ್ಪರ್ಧೆಗಳೊಂದಿಗೆ ನಡೆಯಿತು.
ಶ್ರೀ ಕ್ಷೇತ್ರದ ಅರ್ಚಕ ಕೃಷ್ಣ ಪ್ರಸಾದ್ ಕಿಳಿಂಗಾರು ದೀಪ ಬೆಳಗಿ ಉದ್ಘಾಟಿಸಿದರು. ಸಂಜೆ ನಡೆದ ಸಮರೋಪ ಸಮಾರಂಭ ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಸಂದೀಪ್ ಪೆರಡಾಲ ವಹಿಸಿದ್ದರು. ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ನ್ಯಾಯವಾದಿ. ವೆಂಕಟರಮಣ ಭಟ್ ಚಂಬಲ್ತಿಮಾರ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ವಿವಿಧ ಸ್ಪರ್ಧಾ ವಿಜೇತರಿಗೆ ವಾರ್ಡ್ ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ ಬಹುಮಾನ ವಿತರಿಸಿದರು.
ಶ್ರೀ ಉದನೇಶ್ವರ ದೇವಸ್ಥಾನ ಪೆರಡಾಲ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಜಿ. ಜಗನ್ನಾಥ ರೈ, ಸಮಾಜ ಸೇವಕ ತಿರುಪತಿ ಕುಮಾರ್ ಭಟ್, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಶಿವಶಕ್ತಿ ಕ್ಲಬ್ ನ ಅಧ್ಯಕ್ಷ ಭಾಸ್ಕರ ಪಂಜಿತ್ತಡ್ಕ, ಉದನೇಶ್ವರ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಚಂದ್ರಹಾಸ ಪೆರಡಾಲ ಶುಭ ಹಾರೈಸಿದರು. ಕ್ಲಬ್ ಸದಸ್ಯೆ ಕುಮಾರಿ ಅಮಿತ ಸ್ವಾಗತಿಸಿ, ನಿರೂಪಿಸಿದರು. ಪ್ರಶಾಂತ್ ಪ್ರಿಯರಾಗ್ ವಂದಿಸಿದರು.