ಪಾಲಕ್ಕಾಡ್: ದಕ್ಷಿಣ ಕೇರಳ ಪ್ರಧಾನ ಆರಾಧನಾ ಭೂಮಿಕೆಯಾದ ‘ಬೆಳುಚ್ಚಪ್ಪಾಡ್’ ಎಂಬ ಪರಿಕಲ್ಪನೆಯನ್ನು ಆಧಾರವಾಗಿರಿಸಿ ನಿರ್ಮಿಸಿರುವ ಬೆಳುಚ್ಚಪ್ಪಾಡ್(ದಿ ರಿವಿÀ್ಲರ್ ಆಫ್ ಲೈಟ್) ಶನಿವಾರ ಬಿಡುಗಡೆಗೊಳ್ಳಲಿದೆ.
ಎಂ.ಟಿ.ವಾಸುದೇವನ್ ನಾಯರ್ ಬರೆದು ನಿರ್ದೇಶಿಸಿದ್ದ ನಿರ್ಮಾಲ್ಯಂ ಸಹಿತ ಹಲವು ಮಲೆಯಾಳಂ ಚಲಚಿತ್ರಗಳಲ್ಲಿ ತಪ್ಪಾಗಿ ಬಿಂಬಿಸಲ್ಪಟ್ಟ ಬೆಳುಚ್ಚಪ್ಪಾಡ್ ಆರಾಧನೆಯ ನೈಜ ಚಿತ್ರಣವನ್ನು ತಲಪಿಸುವ ನಿಟ್ಟಿನ ಮೊದಲ ಚಿತ್ರವಾಗಿ ಈ ಚಿತ್ರ ನಿರ್ಮಿಸಲ್ಪಟ್ಟಿದೆ.
ಖ್ಯಾತ ನಿರ್ದೇಶಕ ವಿಜೇಶ್ ಮಣಿ ನಿರ್ದೇಶಿಸಿರುವ ಚಿತ್ರಕ್ಕೆ ಅಮೆರಿಕದಲ್ಲಿ ನೆಲಸಿರುವ ಕೇರಳೀಯರಾದ ಶ್ರೀಮತಿ.ರುಕ್ಮಿಣಿ ಪದ್ಮಕುಮಾರ್ ನಿರ್ಮಿಸಿದ್ದಾರೆ. ಸಿಮಿಮಾ ಅಟೋಗ್ರಫಿಯಲ್ಲಿ ಭವಿ ಭಾಸ್ಕರನ್, ಸ್ಕ್ರೀನ್ ಪ್ಲೇಯಲ್ಲಿ ಶಶಿಧರನ್ ಮಂಙತ್, ಕ್ರಿಯೆಟಿವ್ ಡಿಸೈನ್ ನಲ್ಲಿ ಉದಯಶಂಕರ್, ಮ್ಯೂಸಿಕ್ ನಲ್ಲಿ ರಿತಿನ್ ತೇಜ್, ಧ್ವನಿಯಲ್ಲಿ ಗಣೇಶ್ ಮಾರಾರ್, ಗಿಟಾರ್ ನಲ್ಲಿ ತೇಜು ಮಾರ್ಟಿನ್, ಆರ್ಟ್ ನಿರ್ದೇಶನದಲ್ಲಿ ಕೈಲಾಶ್ ತ್ರಿಪುಣಿತ್ತುರ, ಸಹ ನಿರ್ದೇಶನದಲ್ಲಿ ಶರತ್ ಬಾಬು, ಪ್ರೊಡಕ್ಷನ್ ನಲ್ಲಿ ಸುಮತ್ ತೇಜ್, ಪ್ರೊಡಕ್ಷನ್ ಮ್ಯಾನೇಜರ್ ಆಗಿ ಸುರಿ ಪಳಯಿಡತ್ತ್, ಲೊಕೇಶನ್ ನಲ್ಲಿ ಸತ್ಯನ್ ಕೊಲ್ಲಂಗೋಡ್. ಪ್ರಚಾರದಲ್ಲಿ ಪ್ಲೇನ್ ಬಿಬ್ರಿಜೇಶ್ ಮಣಿ, ಶಿವಪ್ರಸಾದ್ ಮೊದಲಾದವರು ಕೈಜೋಡಿಸಿದ್ದಾರೆ.
ಗಮನಾರ್ಹ: ವಿಶೇಷವೆಂದರೆ ಈ ಚಿತ್ರದಲ್ಲಿ ಬೆಳುಚ್ಚಪ್ಪಾಡ್ ನ ನಿತ್ಯ ಜೀವನದ ರೀತಿ-ನೀತಿಗಳು, ಸಾಗಿಬಂದ ದಾರಿ, ಲಕ್ಷ್ಯಗಳ ಬಗ್ಗೆ ಸ್ವತಃ ಬೆಳುಚ್ಚಪ್ಪಾಡ್ ಆಗಿರುವ ಪಾಲಕ್ಕಾಡಿನ ಶಂಕರನಾರಾಯಣ್ ಎಂಬವರೇ ನಿರೂಪಿಸುತ್ತಾರೆ. ಅರ್ಧ ಗಂಟೆಗಳ ಚಿತ್ರದಲ್ಲಿ ಬೆಳುಚ್ಚಪ್ಪಾಡ್ ನಿಜವಾಗಿಯೂ ಏನೆಂಬುದನ್ನು ಶಂಕರನಾರಾಯಣನ್ ವಿಶಪಡಿಸುತ್ತಾರೆ. ಸಂಪೂಣ್ ಜೀವನ ದೇವಿಯ ಧೀಶಕ್ತಿಗೆ ಸಮರ್ಪಿಸಲ್ಪಟ್ಟದ್ದು ಎಂಬುದು ಇಲ್ಲಿಯ ನಿರೂಪಣೆ. ಅವರ ಸಂಭಾಷಣೆಗಳು ಅಭಿನಯನವಾಗಿರದೆ ನೇರ ವಿವರಣೆಗಳ ರೂಪದಲ್ಲಿ ಈ ಚಿತ್ರದಲ್ಲಿ ತಿಳಿಸಲಾಗಿದೆ.
ಅದೈತ ವೇದಾಂತದ ಅನುಸರಣೆಯ ಶಂಕರನಾರಾಯಣನ್ ಅದರ ವ್ಯಾಪಕ ಪ್ರಚಾರಗಳಿಗಾಗಿ ಭಾರತದಾದ್ಯಂತ ಪರಿಚಿತರು. ಅದರಲ್ಲೂ ಕ್ಲಬ್ ಹೌಸ್ ಆಫ್ ಮೂಲಕ ನಡೆಯುವ ಗುಂಪೊಂದು ಈ ಹೆಸರಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ದಿನಪೂರ್ತಿ ನಡೆಯುತ್ತಿದೆ. ಸರಳ ಸಜ್ಜನ ವ್ಯಕ್ತಿತ್ವದ ಬೆಳುಚ್ಚಪ್ಪಾಡ್ ಶಂಕರನಾರಾಯಣ್ ಅವರ ಬಹುಕಾಲದ ನಿರೀಕ್ಷೆಯ ಫಲವಾಗಿ ಈ ಚಿತ್ರ ರೂಪುಗೊಂಡಿದೆ. ಭಾರತೀಯ ಸನಾತನ ನಂಬಿಕೆ, ಆಚರಣೆಗಳ ತಪ್ಪಾದ ಗ್ರಹಿಸುವಿಕೆ, ಪ್ರಚಾರಗೊಳಿಸುವಿಕೆಯ ಬಗ್ಗೆ ಹಲವು ವರ್ಷಗಳಿಂದ ಪ್ರತಿಭಟಿಸುತ್ತಿರುವ ಅವರ ಧಾರ್ಮಿಕ, ಆಧ್ಯಾತ್ಮಿಕ ಕಳಕಳಿಯ ಫಲವಾಗಿ ಈ ಚಿತ್ರ ರೂಪುಗೊಂಡಿದೆ.
ಚಿತ್ರದಲ್ಲಿ ಶಂಕರನಾರಾಯಣ್ ಬೆಳುಚ್ಚಪ್ಪಾಡ್, ಮಾಸ್ಟರ್ ಬರೀಶ್ ತಾಮರಾಯೂರ್, ಅಜು ಮಣೆಲ್, ಸುಧಿ ಪಶಿಯಾತಂ, ಗಿರೀಶ್, ಬ್ಯಾರಿ, ವಿಷ್ಣು ಪ್ರಸಾದ್, ನಿರಾಮೈ, ರಮಾ, ಇಂದಿರಾ, ಶಾಂತಿ, ಗಿರಿಜಾ, ಶಾಲಿನಿ, ನಂದನ ಮುಂತಾದವರು ನಟಿಸಿದ್ದಾರೆ.
ಚಿತ್ರ ಶನಿವಾರ ನಾಳೆ ಬೆಳಿಗ್ಗೆ 10 ಕ್ಕೆ ಪಾಲಕ್ಕಾಡಿನ ಕೆಡೆಕ್ಕೇಕ್ಕಾವ್ ಕುನ್ನಪ್ಪಳ್ಳಿ ಕಾವಿನಲ್ಲಿ ಬಿಡುಗಡೆಗೊಳ್ಳಲಿದೆ.