ಹುದ್ದೆಗಳ ಕುರಿತ ಇನ್ನಷ್ಟು ಮಾಹಿತಿಗಳು ಕೆಳಗಿನಂತಿದ್ದು, ಆಸಕ್ತರು ಅರ್ಜಿ ಸಲ್ಲಿಸಿ.
ನೇಮಕಾತಿ ಪ್ರಾಧಿಕಾರ : ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್.
ಹುದ್ದೆ ಹೆಸರು : ಗ್ರಾಜುಯೇಟ್, ಡಿಪ್ಲೊಮ ಅಪ್ರೆಂಟಿಸ್.
ಹುದ್ದೆಗಳ ಸಂಖ್ಯೆ : 140
ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನೀಡುವ ಮಾಸಿಕ ಸ್ಟೈಫಂಡ್ ವಿವರ
ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಮಾಸಿಕ ಸ್ಟೈಫಂಡ್ : ರೂ.11,200.
ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಮಾಸಿಕ ಸ್ಟೈಫಂಡ್ : ರೂ.12,000.
ಅರ್ಹತೆಗಳು
ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಡಿಪ್ಲೊಮ ಪಾಸಾದವರು, ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಇಂಜಿನಿಯರಿಂಗ್ ಪದವಿ ಪಾಸ್ ಮಾಡಿರಬೇಕು. ಈ ವಿದ್ಯಾರ್ಹತೆಗಳನ್ನು 2020, 2021, 2022, 2023, 2024 ನೇ ಸಾಲಿನಲ್ಲಿ ತೇರ್ಗಡೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಮೇಲಿನ ಅಪ್ರೆಂಟಿಸ್ ಹುದ್ದೆಗಳಲ್ಲಿ ಆಸಕ್ತಿ ಇರುವವರು ಅಪ್ರೆಂಟಿಶಿಪ್ ರಿಜಿಸ್ಟ್ರೇಷನ್ ಪೋರ್ಟಲ್ https://nats.education.gov.in ಗೆ ಭೇಟಿ ನೀಡಬೇಕು. ಕೇಳಲಾದ ಶೈಕ್ಷಣಿಕ ವಿವರಗಳು, ವೈಯಕ್ತಿಕ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ವಿದ್ಯಾರ್ಹತೆ ದಾಖಲೆಗಳು, ಇ-ಮೇಲ್ ವಿಳಾಸ, ಮೊಬೈಲ್ ನಂಬರ್, ಇತರೆ ದಾಖಲೆ, ಮಾಹಿತಿಗಳು ಅಗತ್ಯವಾಗಿ ಬೇಕು.
ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನ ಅಧಿಕೃತ ವೆಬ್‌ಸೈಟ್ ವಿಳಾಸ : www.cochinshipyard.in
ಅರ್ಜಿ ಸಲ್ಲಿಸಿದವರನ್ನು ವಿದ್ಯಾರ್ಹತೆಯ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ, ಸಂದರ್ಶನ, ಮೆಡಿಕಲ್ ಟೆಸ್ಟ್ ನಡೆಸಿ ಆಯ್ಕೆಮಾಡಲಾಗುತ್ತದೆ.
ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ತರಬೇತುದಾರರಿಗೆ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
ಆನ್‌ಲೈನ್ ಮೂಲಕ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ: 14-08-2024
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 31-08-2024