ತಿರುವನಂತಪುರಂ: ರಾಜ್ಯದಲ್ಲಿ ಯಾವುದೇ ಅಘೋಷಿತ ವಿದ್ಯುತ್ ಕಡಿತವಿಲ್ಲ ಎಂದು ಸಚಿವ ಕೆ. ಕೃಷ್ಣನ್ ಕುಟ್ಟಿ ಹೇಳಿದ್ದು, ಕೇಂದ್ರ ಹಂಚಿಕೆ ಲಭ್ಯವಿಲ್ಲದ ಕಾರಣ, ಕೆಲವು ನಿಯಂತ್ರಣಗಳಿವೆ ಎಂದಿರುವರು.
ಪ್ರಸ್ತುತ ವಿದ್ಯುತ್ ಸಮಸ್ಯೆ ಇಲ್ಲ. ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳ ಮತ್ತು ವಿದ್ಯುತ್ ವಿನಿಮಯ ಮಾರುಕಟ್ಟೆಯಲ್ಲಿ ವಿದ್ಯುತ್ ಲಭ್ಯತೆಯ ಕೊರತೆಯಿಂದಾಗಿ ವಿದ್ಯುತ್ ನಿಯಂತ್ರಣ ಅಗತ್ಯ ಎಂದು ಕೆಎಸ್‍ಇಬಿ ಮೊನ್ನೆ ಸೂಚನೆ ನೀಡಿತ್ತು.
ಸಂಜೆ 7 ರಿಂದ 11 ಗಂಟೆಯವರೆಗೆ ಪೀಕ್ ಅವರ್‍ನಲ್ಲಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವಂತೆಯೂ ವಿದ್ಯುತ್ ಮಂಡಳಿ ಮನವಿ ಮಾಡಿತ್ತು.