ಕೊಟ್ಟಾಯಂ: ಸಿಂಹಮಾಸದ ಪೂಜೆಗಾಗಿ ಶಬರಿಮಲೆ ತೆರೆಯಲಾಗಿದೆ. ದೇವಾಲಯವು ಭಕ್ತರಿಂದ ತುಂಬಿ ತುಳುಕುತ್ತಿತ್ತು. ನಿನ್ನೆ ಸಂಜೆ ತಂತ್ರಿಗಳಾದ ಕಂಠಾರರ್ ರಾಜೀವರ್ ಮತ್ತು ಕಂಠಾರರ್ ಬ್ರಹ್ಮದತ್ತ ಅವರ ಸಮ್ಮುಖದಲ್ಲಿ ಮೇಲ್ಶಾಂತಿ ಪಿ.ಎನ್.ಮಹೇಶ್ ನಂಬೂದಿರಿ ಅವರು ಬಾಗಿಲು ತೆರೆದು ತುಪ್ಪದ ದೀಪ ಬೆಳಗಿಸಿದರು. ಇಂದು ಬೆಳಗಿನ ಜಾವ ಐದು ಗಂಟೆಗೆ ದೇವಸ್ಥಾನ ತೆರೆದು ಪೂಜೆಗಳು ಆರಂಭವಾದವು.
ನಾಳೆಯಿಂದ ಆಗಸ್ಟ್ 21ರವರೆಗೆ ಸಿಂಹಮಾಸದ ಪೂಜೆಗಳು ನಡೆಯಲಿವೆ. ಸಂಪತ್ತು ವೃದ್ಧಿ, ಆಧ್ಯಾತ್ಮ ವೃದ್ಧಿಗಾಗಿ ಅಯ್ಯಪ್ಪ ಸನ್ನಿಧಿಯಲ್ಲಿ ಲಕ್ಷಾರ್ಚನೆ ನಡೆಯಲಿದೆ.
ನಾಳೆಯಿಂದ ಆಗಸ್ಟ್ 21ರವರೆಗೆ ಪಡಿಪೂಜೆ, ಉದಯಾಸ್ತಮಾನ ಪೂಜೆ, ಪುಷ್ಪಾಭಿüμÉೀಕ ಮುಂತಾದ ವಿಶೇಷ ಪೂಜೆಗಳೂ ನಡೆಯಲಿವೆ. 21ರಂದು ರಾತ್ರಿ 10 ಗಂಟೆಗೆ ಸಿಂಹಮಾಸದ ಪೂಜೆಗಳನ್ನು ಮುಗಿಸಿ ಹರಿವರಾಸನವನ್ನು ಹಾಡಿ ಗರ್ಭಗೃಹ ಮುಚ್ಚಲಾಗುವುದು.
ಗುರುವಾಯೂರಪ್ಪನ ದರ್ಶನ ಪಡೆಯಲು ಮೊದಲ ದಿನವೇ ಸಾಕಷ್ಟು ಮಂದಿ ಗುರುವಾಯೂರಿಗೆ ಆಗಮಿಸಿದ್ದರು. ಈ ಬಾರಿ ಸರ್ಕಾರಿ ಮಟ್ಟದ ಓಣಂ ಸಪ್ತಾಹ ಆಚರಣೆ ಇರುವುದಿಲ್ಲ. ಸಿಂಹ ರಾಶಿಯ ಮಾಸವನ್ನು ಸಮೃದ್ಧಿ ಮತ್ತು ಸಂಪತ್ತಿನ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಸಿಂಹ ರಾಶಿಯು ಕೃಷಿಗೆ ಸೂಕ್ತ ತಿಂಗಳು.