ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ರಂಗ ಭೂಮಿ ಕಲಾವಿದ ಕೇರಳ ತುಳು ಅಕಾಡೆಮಿ ಮಾಜಿ ಸದಸ್ಯ ರವೀಂದ್ರ ರೈ ಮಲ್ಲಾವರ ಅವರು 21ನೇ ವರ್ಷದ ಆಟಿ ಅಮಾವಾಸ್ಯೆಯ ಕಷಾಯ ವಿತರಣಾ ಕಾರ್ಯಕ್ರಮವನ್ನು ಆದೂರು ಮಾರ್ಗತ್ತಾಣ ಕಲ್ಲುರ್ಟಿ-ಕಲ್ಕುಡ ದೈವಸ್ಥಾನದ ಸನ್ನಿಧಿಯಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಆದೂರು ಏಳ್ನಾಡು ಗುತ್ತು ಬಿಪಿನ್‍ದಾಸ್ ರೈ ಅವರಿಗೆ ನೀಡಿ ಉದ್ಘಾಟಿಸಿದರು. ಸತ್ಯರಾಯಣ ರೈ ಆದೂರು, ಎಜಿ ಪ್ರಕಾಶ್ ಭಂಡಾರಿ, ಟಿ ಕಿರಣ್ ಮಾಡ ಹೊಸ ಮನೆ, ರಾಧಾಕೃಷ್ಣ ರೈ, ಪ್ರಕಾಶ್ ರೈ, ಮಿಥುನ್ ರೈ , ದೈವಸ್ಥಾನದ ಪೂಜಾರಿ ಅಪ್ಪು ನಾಯ್ಕ , ಕಿರಣ್ ಕುಂಟಾರು, ಮೊದಲಾದವರು ಉಪಸ್ಥಿತರಿದ್ದರು.