HEALTH TIPS

ಭೂಕುಸಿತ ಪೀಡಿತ ವಯನಾಡಿನಲ್ಲಿ ಡೈರಿ ವಲಯಕ್ಕೆ ಬೆಂಬಲ ನೀಡಿದ ಎನ್.ಡಿ.ಡಿ.ಬಿ. ಗೆ ಅಭಿನಂದನೆ ಸೂಚಿಸಿದ ಮಿಲ್ಮಾ

              ತಿರುವನಂತಪುರಂ: ಭೂಕುಸಿತದಿಂದ ಹಾನಿಗೀಡಾದ ವಯನಾಡು ಜಿಲ್ಲೆಯ ಡೈರಿ ಕ್ಷೇತ್ರಕ್ಕೆ ನೀಡಿದ ಬೆಂಬಲಕ್ಕಾಗಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‍ಡಿಡಿಬಿ) ಗೆ ಮಿಲ್ಮಾ ಕೃತಜ್ಞತೆ ಸಲ್ಲಿಸಿದೆ.

              ಮಿಲ್ಮಾ ಅಧ್ಯಕ್ಷ ಕೆ.ಎಸ್.ಮಣಿ ಅವರು ಎನ್‍ಡಿಡಿಬಿ ಅಧ್ಯಕ್ಷ ಮೀನೇಶ್ ಸಿ ಶಾ ಅವರಿಗೆ ಅನಾಹುತದ ಪ್ರಮಾಣ ಮತ್ತು ಹೈನುಗಾರಿಕೆ ಕ್ಷೇತ್ರದ ಮೇಲೆ ಭಾರಿ ಪರಿಣಾಮದ ಬಗ್ಗೆ ತಿಳಿಸಿದರು. ಇದರ ಬೆನ್ನಲ್ಲೇ ಎನ್.ಡಿ.ಡಿ.ಬಿ.  ಜಾನುವಾರುಗಳಿಗೆ 450 ಟನ್ ಸಮತೋಲನ ಮೇವಿನ ಮಿಶ್ರಣ ಮತ್ತು 100 ಟನ್ ಸೈಲೇಜ್ 1 ಕೋಟಿ ರೂ.ಅನುಮೋದಿಸಿದೆ.

              ಈ ದುರಂತವು 7,000 ಕ್ಕೂ ಹೆಚ್ಚು ಜಾನುವಾರುಗಳ ಮೇಲೆ ಪರಿಣಾಮ ಬೀರಿತು ಮತ್ತು 1,000 ಹೆಕ್ಟೇರ್‍ಗೂ ಹೆಚ್ಚು ಹುಲ್ಲುಗಾವಲು ಭೂಮಿಯನ್ನು ನಾಶಪಡಿಸಿತು. ಹಾಲು ಉತ್ಪಾದನೆಯಲ್ಲಿ ದಿನಕ್ಕೆ 20 ಸಾವಿರ ಲೀಟರ್‍ಗೂ ಹೆಚ್ಚು ನಷ್ಟ ಉಂಟಾಗಿದೆ.

              ಮೀನೇಶ್ ಸಿ ಶಾ ಅವರು ಕೇರಳದ ಪ್ರಮುಖ ಹಾಲು ಉತ್ಪಾದಕ ಪ್ರದೇಶವಾದ ವಯನಾಡ್‍ನ ಡೈರಿ ವಲಯದ ಪುನರುಜ್ಜೀವನಕ್ಕೆ ಎನ್.ಡಿ.ಡಿ.ಬಿ. ಯ ಬೆಂಬಲವನ್ನು ವಾಗ್ದಾನ ಮಾಡಿದರು. ಡೈರಿ ಕ್ಷೇತ್ರದ ಸುಸ್ಥಿರ ಚೇತರಿಕೆ ಮತ್ತು ಬೆಳವಣಿಗೆಯನ್ನು ಸಕ್ರಿಯಗೊಳಿಸಲು ವಯನಾಡಿನ ಡೈರಿ ರೈತ ಸಮುದಾಯವನ್ನು ಬೆಂಬಲಿಸಲು ಓಆಆಃ ಬದ್ಧವಾಗಿದೆ ಎಂದು ಅವರು ಮಿಲ್ಮಾ ಅಧ್ಯಕ್ಷರಿಗೆ ಭರವಸೆ ನೀಡಿದರು.

            ಎನ್‍ಡಿಡಿಬಿ ಡೈರಿ ಕ್ಷೇತ್ರದ ಸುಸ್ಥಿರ ಚೇತರಿಕೆಗೆ ನಿರಂತರ ಬೆಂಬಲವನ್ನು ಭರವಸೆ ನೀಡಿದೆ. ಮಿಲ್ಮಾದ ಮಲಬಾರ್ ಪ್ರದೇಶ ಒಕ್ಕೂಟವು ಸಂತ್ರಸ್ತ ಹೈನುಗಾರರಿಗೆ ಅಗತ್ಯ ವಸ್ತುಗಳನ್ನು ವಿತರಿಸಿತು.

           ಮಿಲ್ಮಾ ಅಧ್ಯಕ್ಷ ಕೆ.ಎಸ್.ಮಣಿ ಮಾತನಾಡಿ, ವಯನಾಡಿನ ಹೈನುಗಾರರಿಗೆ ತ್ವರಿತ ನೆರವು ನೀಡಿದ ಎನ್‍ಡಿಡಿಬಿಗೆ ಮಿಲ್ಮಾ ಮತ್ತು ಮಲಬಾರ್ ರೀಜನ್ ಯೂನಿಯನ್ ಧನ್ಯವಾದಗಳನ್ನು ಅರ್ಪಿಸುತ್ತದೆ. ಎನ್‍ಡಿಡಿಬಿಯಿಂದ ಸಮಯೋಚಿತ ನೆರವು ಸುಸ್ಥಿರ ಡೈರಿ ಕಾರ್ಯಾಚರಣೆಗಳಿಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

              ಭೂಕುಸಿತ ಅನಾಹುತದ ಹಿನ್ನೆಲೆಯಲ್ಲಿ ಮಿಲ್ಮಾ ಹಾಗೂ ಮೂರು ಪ್ರಾದೇಶಿಕ ಒಕ್ಕೂಟಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂ,ನೆರವನ್ನೂ ನೀಡಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries