ನವದೆಹಲಿ: ಅರುಣಾಚಲ ಪ್ರದೇಶದ ಇಬ್ಬರು ವ್ಯಕ್ತಿಗಳು ಕಳೆದ ಎರಡು ವರ್ಷಗಳಿಂದ ಕಣ್ಮರೆಯಾಗಿದ್ದಾರೆ. ಗಿಡಮೂಲಿಕೆ ಔಷಧ ಸಸ್ಯಗಳನ್ನು ಹುಡುಕೊಂಡು ಭಾರತ- ಚೀನಾ ಗಡಿಯ ದುರ್ಗಮ ಪ್ರದೇಶಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಈ ಇಬ್ಬರನ್ನು ಚೀನಿ ಸೇನೆ ಬಂಧಿಸಿ ವಶದಲ್ಲಿಟ್ಟುಕೊಂಡಿದೆ ಎಂದು ನಂಬಲಾಗಿದೆ.

ಬಟೆಲಮ್ ಟಿಕ್ರೊ (35) ಮತ್ತು ಇವರ ಸೋದರ ಸಂಬಂಧಿ ಬೈನ್ಸಿ ಮಾನ್ಯು (37) ಕಾಣೆಯಾದವರು. ಟಿಕ್ರೊ ಅವಿವಾಹಿತನಾಗಿದ್ದು, ಮಾನ್ಯು ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ.
2022ರ ಆಗಸ್ಟ್ 19ರಂದು ಈ ಇಬ್ಬರು ಗಿಡಮೂಲಿಕೆ ಔಷಧ ಸಸ್ಯಗಳನ್ನು ಅರಸಿಕೊಂಡು ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಎತ್ತರದ ಛಾಗ್ಲಾಗಾಮ್ ಪ್ರದೇಶಕ್ಕೆ ಹೋಗಿದ್ದರು. 2022ರ ಆಗಸ್ಟ್ 24ರಂದು ಇವರು ಕೊನೆ ಬಾರಿಗೆ ಕೆಲವು ಗ್ರಾಮಸ್ಥರ ಕಣ್ಣಿಗೆ ಗಡಿ ಭಾಗದಲ್ಲಿ ಕಾಣಿಸಿದ್ದರು. ಆನಂತರ, ಈ ಇಬ್ಬರೂ ಎಲ್ಲೂ ಕಾಣಿಸಿಲ್ಲ. ಇವರಿಗಾಗಿ ವ್ಯಾಪಕ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ.
'ಇಬ್ಬರನ್ನೂ ಚೀನಾ ಸೇನೆ ಬಂಧಿಸಿಟ್ಟಿದೆ ಎಂಬುದು ನಮಗೆ ತಿಳಿದಿದೆ. ನಮ್ಮ ಸಹೋದರರ ಬಗ್ಗೆ ಮಾಹಿತಿ ಪಡೆಯಲು ಸ್ಥಳೀಯ ಸೇನಾ ಅಧಿಕಾರಿಗಳನ್ನು ಹಲವು ಬಾರಿ ಸಂಪರ್ಕಿಸಿದ್ದೇವೆ. ಈ ವಿಷಯವನ್ನು ಭಾರತೀಯ ಸೇನೆಯು ಚೀನಿ ಸೇನೆ ಜತೆಗೆ ಪ್ರಸ್ತಾಪಿಸಿದೆ. ಆದರೆ ಅವರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ' ಎಂದು ಟಿಕ್ರೊ ಅವರ ಸಹೋದರ ದಿಶಾನ್ಸೊ ಚಿಕ್ರೊ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.