ವಯನಾಡು: ಮಾಧವ್ ಗಾಡ್ಗೀಳ್ ಅವರು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ವರದಿ ಸಲ್ಲಿಸಿದಾಗ ಅವರ ಪ್ರತಿಕೃತಿ ದಹಿಸಿದ್ದು ಕೇರಳದವರು ಎಂದು ಸ್ವಾಮಿ ಚಿದಾನಂದಪುರಿ ಹೇಳಿರುವರು.
ವಯನಾಡಿನಲ್ಲಿ ಸಂಭವಿಸಿದ ದುರಂತವು ತಪ್ಪು ಅಭಿವೃದ್ಧಿ ಮಾದರಿಗಳ ಕೆಟ್ಟ ವಿಕಸನವಾಗಿದೆ ಎಂಬುದನ್ನು ಕೇರಳ ಕನಿಷ್ಠ ಅರ್ಥಮಾಡಿಕೊಳ್ಳಬೇಕು ಎಂದು ಸ್ವಾಮಿ ಹೇಳಿದರು. ವಯನಾಡಿನ ವಿಪತ್ತು ಪೀಡಿತ ಪ್ರದೇಶಕ್ಕೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಅವರು ಪ್ರತಿಕ್ರಿಯಿಸಿದರು.
ಮಾಧವ್ ಗಾಡ್ಗೀಳ್ ಅವರು ಪಶ್ಚಿಮ ಘಟ್ಟಗಳ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ವರದಿ ಸಲ್ಲಿಸಿದಾಗ, ಅವರ ಪ್ರತಿಕೃತಿಯನ್ನು ಕ್ವಾರಿ ಮಾಫಿಯಾಗಳು ಮತ್ತು ಮತಾಂಧರು ಸುಟ್ಟು ಹಾಕಿದ್ದರು. ಕೇರಳದಲ್ಲಿ ಪರಿಸರ ಸ್ನೇಹಿ ಅಭಿವೃದ್ಧಿಗಾಗಿ ಪ್ರತಿಪಾದಿಸಿದವರು, ಪಿಟಿ ಥಾಮಸ್ ಅವರ ಪ್ರತಿಕ್ರಿತಿಗೆ ಅಂತ್ಯಕ್ರಿಯೆಯ ಮೆರವಣಿಗೆಯನ್ನು ನಡೆಸಿದರು. ಅಂದು ಸೂಚಿಸಿದ ಕ್ಷೇತ್ರಗಳಲ್ಲಿ ಇಂದು ಈ ದುರಂತಗಳು ನಡೆದಿವೆ ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದರು. ಅನಾಹುತ ಸಂಭವಿಸಿದಾಗ ಅಳಲು ತೋಡಿಕೊಂಡು ಅದನ್ನು ಮರೆತು ಬಿಡುವ ನಿಲುವು ಬದಲಿಸಿ, ಗುಡ್ಡಗಾಡು ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಹಾಗೂ ನಿರ್ಮಾಣ ಚಟುವಟಿಕೆಗಳನ್ನು ನಿಲ್ಲಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಕೇರಳವು ದೇಶದಲ್ಲೇ ಅತಿ ಹೆಚ್ಚು ಭೂಕುಸಿತಕ್ಕೆ ಒಳಗಾಗುವ ರಾಜ್ಯಗಳಲ್ಲಿ ಒಂದಾಗಿದೆ. ಕೇರಳದಲ್ಲಿ ದುರಂತದಲ್ಲಿ ಇಷ್ಟೊಂದು ಹಾನಿ, ಪ್ರಾಣಹಾನಿ, ಸಂಕಷ್ಟಕ್ಕೆ ಸಿಲುಕಿರುವುದು ಇದೇ ಮೊದಲು. ಕೇಂದ್ರ ಪಡೆಗಳು, ವಿಪತ್ತು ನಿರ್ವಹಣಾ ಘಟಕಗಳು ಮತ್ತು ಸೇವಾ ಭಾರತಿಯಂತಹ ಆಂದೋಲನಗಳ ಜಂಟಿ ಪ್ರಯತ್ನದಿಂದ ರಕ್ಷಣಾ ಕಾರ್ಯಾಚರಣೆಯು ಉತ್ತಮವಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು.