ಕಾಸರಗೋಡು: ಕನ್ನಡ ಭಾಷೆ, ಸಂಸ್ಕøತಿಗಳಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ 'ಸಾಹಿತ್ಯ ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ' ಎಂಬ ಕಾರ್ಯಕ್ರಮದ ಅಂಗವಾಗಿ ಹಿರಿಯ ಕನ್ನಡ ಧುರೀಣ, ರಂಗತಜ್ಞ, ನಿವೃತ್ತ ಉಪಜಿಲ್ಲಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ(ಜಿ.ಕೆ ಶೆಟ್ಟಿ)ಅವರನ್ನು ಕಾಸರಗೋಡಿನ ಕೇಳುಗುಡ್ಡೆಯಲ್ಲಿರುವ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು.
ಕನ್ನಡ ಸಾಹಿತ್ಯಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ಗದರು. ಈ ಸಂದರ್ಭ ಜಿ.ಕೆ ಶೆಟ್ಟಿಅವರನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಡಾ. ಜಯಪ್ರಕಾಶ್ ನಾರಾಯಣ್ ಅಭಿನಂದಿಸಿದರು.
ಹಿರಿಯ ರಂಗಕರ್ಮಿ ಕೆ.ಸುಬ್ಬಣ್ಣ ಶೆಟ್ಟಿ ಅಭಿನಂದನಾ ಭಾಷಣ ಮಾಡಿ, ಕಾಸರಗೋಡಿನಲ್ಲಿ ಕನ್ನಡ ಭಾಷೆಗೆ, ನಾಟಕ ರಂಗಕ್ಕೆ ಗೋಪಾಲಕೃಷ್ಣ ಶೆಟ್ಟಿ ಸಲ್ಲಿಸಿದ ಸೇವೆ ಮಹತ್ತರವಾದುದು. ಇಪ್ಪತೈದಕ್ಕೂ ಹೆಚ್ಚು ವರ್ಷಗಳ ಕಾಲ ಬಂಟರ ಸಂಘದ ಪದಾಧಿಕಾರಿಯಾಗಿ ಸಂಘವನ್ನು ಮುನ್ನಡೆಸಿದ ರೀತಿ, ಮಾಡಿದ ಸಮಾಜ ಸೇವೆ ಶ್ಲಾಘನೀಯವಾದುದು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ನಿವೃತ್ತ ಮುಖ್ಯಶಿಕ್ಷಕ ರಾಜಾರಾಮ ರಾವ್ ಮೀಯಪದವು, ಸುನಿಲ್ ಚಂದ್ರ ಆಳ್ವ, ಚಿತ್ರಲೇಖ, ಉದಯ ಕುಮಾರ ರೈ ಉಪಸ್ಥಿತರಿದ್ದರು.