ಮಂಜೇಶ್ವರ: ಬಿಜೆಪಿ ಮಂಜೇಶ್ವರ ಮಂಡಲ ಎಸ್.ಸಿ. ಮೋರ್ಚಾ ಮಂಡಲಾಧ್ಯಕ್ಷರಾಗಿದ್ದ ಸಮಾಜ ಸೇವಕ ವರ್ಕಾಡಿಯ ದಿ. ಕೃಷ್ಣಪ್ಪ ಮಡಿಕ ಅವರಿಗೆ ನುಡಿನಮನ ಕಾರ್ಯಕ್ರಮ ಮಂಗಳವಾರ ಕಾವಿ ಸುಬ್ರಮಣ್ಯ ದೇವಾಲಯ ಪರಿಸರದಲ್ಲಿ ಜರಗಿತು.
ಪಕ್ಷದ ವತಿಯಿಂದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿಜಯ್ ಕುಮಾರ್ ರೈ, ಜಿಲ್ಹಾ ಉಪಾಧ್ಯಕ್ಷ ಸುಧಾಮ ಗೋಸಾಡ, ಮಂಡಲಾಧ್ಯಕ್ಷ ಆದರ್ಶ ಬಿ ಎಂ, ಎ.ಕೆ.ಕಯ್ಯಾರ್, ಮುಖಂಡರಾದ ಮಣಿಕಂಠ ರೈ, ತುಳಸಿ ಕುಮಾರಿ, ಜಗದೀಶ್ ಚೇಂಡ್ಲ, ಭಾಸ್ಕರ್ ಪೊಯ್ಯೆ, ರವಿರಾಜ್, ಸಾಮಾಜಿಕ ನೇತಾರರದ ಸುಭಾಷ್ ಅಡಪ, ರಾಧಾಕೃಷ್ಣ ಹೊಳ್ಳ,ನಾಗರಾಜ್ ಭಟ್, ದೇವಪ್ಪ ಹಾಗೂ ಅಪಾರ ಕಾರ್ಯಕರ್ತರು, ಬಂಧುಗಳು ಉಪಸ್ಥಿತರಿದ್ದರು.