ಕಾಸರಗೋಡು: ಬಾಲ ಲೀಲೆಯ ಮೂಲಕ ಎಲ್ಲರನ್ನೂ ಆಕರ್ಷಿಸುವ ಗುಣ ಕೃಷ್ಣನದ್ದು. ಧರ್ಮವನ್ನು ರಕ್ಷಿಸಿ ದುಷ್ಟರನ್ನು ಶಿಕ್ಷಿಸುವ ಕೃಷ್ಣನಂತಹ ಮಕ್ಕಳು ಸಮಾಜದಲ್ಲಿ ಬೆಳೆಯಬೇಕು. ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ತುಂಬುವಲ್ಲಿ ತಾಯಂದಿರು ಕಾಳಜಿ ವಹಿಸಬೇಕು. ಕೃಷ್ಣನ ಸಂದೇಶವನ್ನು ಮಕ್ಕಳಿಗೆ ದಾಟಿಸುವ ಮೂಲಕ ಸನಾತನ ಧರ್ಮವನ್ನು ಉಳಿಸಿ ಬೆಳೆಸಬಹುದು. ಆ ಮೂಲಕ ಭಾರತೀಯ ಸಂಸ್ಕøತಿ, ಸಂಸ್ಕಾರವನ್ನು ದಾಟಿಸಿ ಮಕ್ಕಳನ್ನು ಸತ್ಪ್ರಜೆಯನ್ನಾಗಿ ರೂಪಿಸಬೇಕೆಂದು ದೈವ ನರ್ತನ ಕಲಾವಿದ ಸುರೇಂದ್ರನ್ ಪಣಿಕ್ಕರ್ ಹೇಳಿದರು.
ಅವರು ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ 22 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಹಾಗು 13 ನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ಶ್ರೀಕೃಷ್ಣ ವೇಷ ಸ್ಪರ್ಧೆಯನ್ನು ಸೋಮವಾರ ದೀಪ ಪ್ರಜ್ವಲನಗೈದು ಮಾತನಾಡಿದರು.
ಅಷ್ಟಮಿ ಸಮಿತಿ ಅಧ್ಯಕ್ಷ ಮಹಾಲಿಂಗ ನಾಯ್ಕ್ ಅಧ್ಯಕ್ಷತೆ ವಹಿಸಿದರು. ಕೆಸಿಎನ್ ಚಾನೆಲ್ ನಿರ್ದೇಶಕ ಪುರುಷೋತ್ತಮ ನಾೈಕ್, ಕುಶಲ ಕುಮಾರ್ ಪಾರೆಕಟ್ಟೆ, ಅನಿಲ್ ರಾಜ್, ರಾಮದಾಸ್, ಯೋಗೀಶ್ ಕೋಟೆಕಣಿ, ಶ್ರೀಕಾಂತ್ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು.
ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ನುಡಿದು ಸ್ವಾಗತಿಸಿದರು. ಕಾರ್ಯಕ್ರಮವನ್ನು ಜಗದೀಶ್ ಕೂಡ್ಲು, ಕಾವ್ಯ ಕುಶಲ, ಅಶ್ವಿನಿ ಗುರುಪ್ರಸಾದ್, ಲತಾ ಪ್ರಕಾಶ್ ನಿರೂಪಿಸಿದರು. ಶಿಲ್ಪಾ ವರಪ್ರಸಾದ್ ವಂದಿಸಿದರು.
ಬೆಳಗ್ಗೆ ಹನುಮ ಭಕ್ತ ಮಹಿಳಾ ಭಜನಾ ಸಂಘ ಆರಿಕ್ಕಾಡಿ, ಶ್ರೀರಾಗ ಸುಧಾ ಭಜನಾಮೃತ ಮಧೂರು ಅವರಿಂದ ಭಜನಾ ಸಂಕೀರ್ತನೆ ನಡೆಯಿತು. ಆ ಬಳಿಕ ಶ್ರೀ ಕೃಷ್ಣ ವೇಷ ಸ್ಪರ್ಧೆ, ಸಭಾ ಕಾರ್ಯಕ್ರಮ ಹಾಗು ಬಹುಮಾನ ವಿತರಣೆ ನಡೆಯಿತು. ಇದೇ ವೇಳೆ ಮೊಸರು ಕುಡಿಕೆ ಸ್ಪಧೆರ್É ಜರಗಿತು.