ಕಾಸರಗೋಡು: ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಆಲ್ ಕೇರಳ ಫೆÇೀಟೋಗ್ರಾಫರ್ ಅಸೋಸಿಯೇಶನ್(ಕೆಪಿಎ) ಕಾಸರಗೋಡು ಪೂರ್ವ ಘಟಕದ ಬ್ಲಡ್ ಡೋನರ್ಸ್ ಕ್ಲಬ್ ವತಿಯಿಂದ ಕಾಸರಗೋಡು ಜನರಲ್ ಆಸ್ಪತ್ರೆ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದಾನ ಶಿಬಿರ ನಡೆಯಿತು.
ಘಟಕದ ಅಧ್ಯಕ್ಷ ಅಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಎ ಕಾಸರಗೋಡು ಜಿಲ್ಲಾ ರಕ್ತದಾನಿಗಳ ಸಂಯೋಜಕ ಸನ್ನಿ ಜೇಕಬ್ ರಕ್ತದಾನಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಜಿಲ್ಲಾ ಕೋಶಾಧಿಕಾರಿ ಸುನಿಲ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರನ್, ಜಿಲ್ಲಾ ನ್ಯಾಚುರಲ್ ಕ್ಲಬ್ ಸಂಯೋಜಕ ದಿನೇಶ್ ಇನ್‍ಸೈಟ್, ಕೋಶಾಧಿಕಾರಿ ವಾಮನ್ ಕುಮಾರ್, ಘಟಕದ ಪ್ರಭಾರಿ ಮನು ಎಲ್ಲೋರ ಉಪಸ್ಥಿತರಿದ್ದರು. ಘಟಕದ ಬ್ಲಡ್ ಡೋನರ್ಸ್ ಕ್ಲಬ್ ಸಂಯೋಜಕ ಮಣಿ ಐ ಫೆÇೀಕಸ್ ಸ್ವಾಗತಿಸಿದರು. ಘಟಕದ ಪಿಆರ್‍ಒ ಮನೀಶ್ ವಂದಿಸಿದರು.