ಕಣ್ಣೂರು: ಕಣ್ಣೂರು ಜಿಲ್ಲೆಯಲ್ಲಿ ಇಬ್ಬರಲ್ಲಿ ನಿಪಾ ಲಕ್ಷಣಗಳು ದೃಢಪಟ್ಟಿವೆ. ಮಟ್ಟನ್ನೂರು ಮಾಲೂರು ನಿವಾಸಿಗಳಿಗೆ ನಿಪಾ ಲಕ್ಷಣಗಳು ದೃಢಪಟ್ಟಿವೆ.
ಜ್ವರ, ವಾಂತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಟ್ಟನ್ನೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಹಣ್ಣಿನ ಅಂಗಡಿಯಲ್ಲಿ ಕೆಲಸಗಾರರು. ಸದ್ಯ ಅವರು ಆರೋಗ್ಯ ಕಾರ್ಯಕರ್ತರ ನಿಗಾದಲ್ಲಿದ್ದಾರೆ.
ಕಳೆದ ತಿಂಗಳು ರಾಜ್ಯದಲ್ಲಿ ನಿಪಾ ವೈರಸ್‍ನಿಂದ ಮಗುವೊಂದು ಸಾವನ್ನಪ್ಪಿತ್ತು. ಮಲಪ್ಪುರಂನ ಪಂಡಿಕ್ಕಾಡ್‍ನ 14 ವರ್ಷದ ಬಾಲಕ ನಿಪಾದಿಂದ ಮೃತಪಟ್ಟಿದ್ದ. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾನೆ.