ಕಾಸರಗೋಡು: ಮಹಾ ಶ್ರೀಚಕ್ರ ನವಾವರಣ ಪೂಜೆ ಆ. 31ರಂದು ಮಧ್ಯಾಹ್ನ 2ಗಂಟೆಗೆ ಎಡನೀರು ಮಠದಲ್ಲಿ ನಡೆಯಲಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಶುಭಾಶೀರ್ವಾದದೊಂದಿಗೆ ಕಾರ್ಯಕ್ರಮ ನಡೆಯಲಿದೆ. ಬ್ರಹ್ಮಶ್ರೀ ನುಲ್ಲಪಳ್ಳಿ ಕೃಷ್ಣನ್ ನಂಬೂದಿರಿ ಅವರ ಪೌರೋಹಿತ್ಯದಲ್ಲಿ ಕಾರ್ಯಕ್ರಮ ನಡೆಯುವುದು.
ಮಧ್ಯಾಹ್ನ 2ಗಂಟೆಗೆ ವಿದ್ವಾನ್ ಬಳ್ಳಪದವು ಯೋಗೀಶ್ ಶರ್ಮ ಮತ್ತು ಬಳಗದವರಿಂದ ನವಾವರಣ ಕೃತಿ ಆಲಾಪನೆ ನಡೆಯುವುದು.