ಮಾಸ್ಕೋ: ರಷ್ಯಾದಲ್ಲಿ ಉಕ್ರೇನ್ ನಡೆಸಿದ ಶೆಲ್ ದಾಳಿಗೆ ತ್ರಿಶೂರ್ ನ ಯುವಕ ಮೃತಪಟ್ಟಿದ್ದಾನೆ. ಕಲ್ಲೂರು ನೈರಂಗಡಿ ಮೂಲದ ಕಂಕಿಲ್ ಚಂದ್ರನ್ ಎಂಬವರ ಪುತ್ರ ಸಂದೀಪ (36) ಮೃತರು.
ರಷ್ಯಾದ ಮಲಯಾಳಿ ಸಂಘದ ಸದಸ್ಯರು ಆಸ್ಪತ್ರೆಯಲ್ಲಿ ಮೃತದೇಹವನ್ನು ಗುರುತಿಸಿದ್ದಾರೆ. ಭಾನುವಾರ ಸಂಜೆ ಸಂದೀಪ್ ಸಾವಿನ ಬಗ್ಗೆ ಸಂಬಂಧಿಕರಿಗೆ ದೃಢೀಕರಣ ಸಿಕ್ಕಿತ್ತು. ಮೊದಲಿಗೆ ಅವರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಮಾತ್ರ ಲಭಿಸಿತ್ತು. ಮಲಯಾಳಿ ಅಸೋಸಿಯೇಷನ್ ಸಾವು ಖಚಿತಪಡಿಸಿತು.
ಕಳೆದ ಏಪ್ರಿಲ್‍ನಲ್ಲಿ ಸಂದೀಪ್ ಮತ್ತು ಇತರ ಏಳು ಮಲಯಾಳಿಗಳು ಚಾಲಕುಡಿಯ ಏಜೆನ್ಸಿ ಮೂಲಕ ರಷ್ಯಾಕ್ಕೆ ತೆರಳಿದ್ದರು.
ಸಂದೀಪ್ ಮಾಸ್ಕೋದ ರೆಸ್ಟೊರೆಂಟ್‍ನಲ್ಲಿ ಕೆಲಸ ಮಾಡಲು ರಷ್ಯಾಕ್ಕೆ ಹೋಗುವುದಾಗಿ ತನ್ನ ಕುಟುಂಬಕ್ಕೆ ತಿಳಿಸಿದ್ದನು, ಆದರೆ ನಂತರ ಸಂದೀಪ್ ರಷ್ಯಾದ ಮಿಲಿಟರಿ ಕ್ಯಾಂಪ್‍ನಲ್ಲಿರುವ ಕ್ಯಾಂಟೀನ್‍ನಲ್ಲಿ ಕೆಲಸ ಮಾಡುತ್ತಿದ್ದು, ಸುರಕ್ಷಿತವಾಗಿದ್ದಾರೆ ಎಂದು ಕುಟುಂಬಕ್ಕೆ ತಿಳಿಸಿದ್ದಾನೆ.