ಕಾಸರಗೋಡು: ನಗರದ ತಾಳಿಪಡ್ಪುವಿನಲ್ಲಿರುವ ಬಿಜೆಪಿ ಜಿಲ್ಲಾ ಸಮಿತಿ ಕಚೇರಿಯಲ್ಲಿ ಬೆಂಕಿ ಆಕಸ್ಮಿಕದಿಂದ ಅಪಾರ ನಷ್ಟ ಸಂಭವಿಸಿದೆ. ಬಹು ಅಂತಸ್ತಿನ ಕಟ್ಟಡದ ತಳ ಭಾಗದ ಅಡುಗೆ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದು ಬ್ಯಾನರ್, ಪೇಪರ್ ಸೇರಿದಂತೆ ಚುನಾವಣಾ ಸಾಮಗ್ರಿಗೆ ತಗುಲಿ ಅತ್ಯಂತ ಶೀಘ್ರ ಬೆಂಕಿ ವ್ಯಾಪಿಸಿದೆ. ತಕ್ಷಣ ಕರಂದಕ್ಕಾಡಿನಿಂದ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ಶಮನಗೊಳಿಸಿದೆ. ಪಿವಿಸಿ ಪೈಪ್, ಇಲೆಕ್ಟ್ರಾನಿಕ್ ಸಾಮಗ್ರಿ, ವಯರಿಂಗ್ ಸಾಮಗ್ರಿ ಬೆಂಕಿಗಾಹುತಿಯಾಗಿದೆ. ಮೂರು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಬೆಂಕಿ ಆಕಸ್ಮಿಕಕ್ಕೆ ಕಾರಣವೆನ್ನಲಾಗಿದೆ.