ಕಾಸರಗೋಡು: ಹಿರಿಯ ಸಾಹಿತಿ, ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಅವರ ಸಂಸ್ಮರಣೆ ಹಾಗೂ ಕವಿತಾ ಕಮ್ಮಟ ನಗರದ ಬಿ ಇ ಎಂ ಪ್ರೌಢಶಾಲೆಯಲ್ಲಿ ಜರುಗಿತು. ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಲಾ ಮುಖ್ಯ ಶಿಕ್ಷಕ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಕವಯತ್ರಿ ದಿವ್ಯಾಗಟ್ಟಿ ಪರಕ್ಕಿಲ ಸಮಾರಂಭ ಉದ್ಘಾಟಿಸಿ, ಕವಿ ಕಯ್ಯಾರ ಕಿಞಣ್ಣ ರೈ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು. ಈ ಸಂದರ್ಭ ಕವಿ ಕಯ್ಯಾರ ಕಿಞ್ಞಣ್ಣ ರೈ ಅವರ ಭಾವಚಿತ್ರ ರಚನೆ ಹಾಗೂ ಅವರ ಭಾವಗೀತೆಗಳನ್ನು ಹಾಡುವ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರಕ್ಷಿತಾ, ಶಾಲಾ ಅಧ್ಯಾಪಕರಾದ ಮುರಳಿ ಮಾಧವ ಹಾಗೂ ಯಶವಂತ ವೈ ಉಪಸ್ಥಿತರಿದ್ದರು. ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸಂಚಾಲಕಿ ಸೌಮ್ಯ ಮಯ್ಯ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಶಿಕ್ಷಕಿ ರೋಹಿತಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಿ ಮಾನಸ ವಂದಿಸಿದರು.