ಬದಿಯಡ್ಕ : ಮಾವಿನಕಟ್ಟೆಯಲ್ಲಿ ಖಾಸಗಿ ಬಸ್ ಕಾರು ಡಿಕ್ಕಿಯಾಗಿ ಗಂಭೀರಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕಾರು ಚಾಲಕ, ಮಂಗಲ್ಪಡಿ ಪ್ರತಾಪನಗರ ನಿವಾಸಿ ಮುಬಾಶಿರ್(21)ಮೃತಪಟ್ಟಿದ್ದಾರೆ. ಕುಂಬಳೆ-ಮುಳ್ಳೇರಿಯ ಕೆಎಸ್‍ಟಿಪಿ ರಸ್ತೆಯ ಮಾವಿನಕಟ್ಟೆಯಲ್ಲಿ ಬುಧವಾರ ಅಪಘಾತ ನಡೆದಿದ್ದು, ಗಂಭೀರ ಗಾಯಗೊಂಡಿದ್ದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು. ವಿದೇಶದಲ್ಲಿ ಸೂಪರ್‍ಮಾರ್ಕೆಟ್‍ನಲ್ಲಿ ಉದ್ಯೋಗಿಯಾಗಿದ್ದ ಮುಬಾಶಿರ್ ಒಂದು ತಿಂಗಳ ಹಿಂದೆಯಷ್ಟೆ ಊರಿಗೆ ಆಗಮಿಸಿದ್ದು, ಸೆ. 6ರಂದು ಮತ್ತೆ ವಿದೇಶಕ್ಕೆ ತೆರಳುವ ಸಿದ್ಧತೆ ಮಧ್ಯೆ ಅಪಘಾತ ನಡೆದಿದೆ.