ತಿರುವನಂತಪುರಂ: ವಯನಾಡ್ ಭೂಕುಸಿತದಲ್ಲಿ ನಾಪತ್ತೆಯಾದವರ ಸಂಖ್ಯೆಯನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಕಂದಾಯ ಇಲಾಖೆ ಸಚಿವ ಕೆ.ರಾಜನ್ ಹೇಳಿದ್ದಾರೆ.
ಡಿಎನ್‍ಎ ಪರೀಕ್ಷೆಯ ಫಲಿತಾಂಶ ಬಂದ ನಂತರ ಸಂಪೂರ್ಣ ಅಂಕಿಅಂಶಗಳನ್ನು ಪ್ರಕಟಿಸಬಹುದು ಎಂದಿರುವರು.
ಭೂಕುಸಿತದ ನಂತರ 211 ದೇಹದ ಭಾಗಗಳು ಮತ್ತು 231 ಮೃತ ದೇಹಗಳು ಸೇರಿದಂತೆ 442 ಮೃತ ದೇಹಗಳು ಪತ್ತೆಯಾಗಿವೆ. ಈ ಪೈಕಿ 22 ಶವಗಳು ಸೇರಿದಂತೆ 20 ಮೃತದೇಹಗಳು ಮತ್ತು 2 ದೇಹದ ಭಾಗಗಳನ್ನು ಅವರ ಸಂಬಂಧಿಕರು ಗುರುತಿಸಿದ ನಂತರ ಬಿಟ್ಟುಕೊಡಲಾಗಿದೆ.
220 ಮೃತ ದೇಹಗಳನ್ನು ಡಿಎನ್ಎ ಪರೀಕ್ಷೆಗೆ ನೀಡಲಾಗಿದೆ. ಇವುಗಳಲ್ಲಿ ಮೂಳೆಗಳು ಸೇರಿದಂತೆ 52 ದೇಹದ ಭಾಗಗಳನ್ನು ಡಿಎನ್‍ಎ ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಬಹುದೇ ಎಂದು ನಾವು ನೋಡಬೇಕಾಗಿದೆ. ಉಳಿದ 194 ದೇಹದ ಭಾಗಗಳನ್ನು ಗುರುತಿಸಲಾಗಿದೆ. ಉಳಿದ 155 ಮಾದರಿಗಳಲ್ಲಿ 54 ಜನರನ್ನು ಗುರುತಿಸಲಾಗಿದೆ. ಇವೆಲ್ಲವನ್ನೂ ಸೇರಿಸಿದರೆ ದುರಂತದಲ್ಲಿ 270 ಮಂದಿ ಸಾವನ್ನಪ್ಪಿರಬಹುದು ಎಂದು ಕೆ.ರಾಜನ್ ತಿಳಿಸಿರುವರು.
ಸಂಪೂರ್ಣ ಮಾಹಿತಿ ಪಡೆಯಲು, ನಾಪತ್ತೆಯಾದ 118 ಜನÀರ ಸಂಬಂಧಿಕರ ರಕ್ತದ ಮಾದರಿ ಕ್ರಾಸ್ ಮ್ಯಾಚಿಂಗ್ ಅನ್ನು ಪೂರ್ಣಗೊಳಿಸಬೇಕು ಅವರಲ್ಲಿ ಮೂವರು ಬಿಹಾರದವರು. ಅವರ ಸಂಬಂಧಿಕರು ಬರಲು ದಿನಗಳು ಬೇಕು.
ಉಳಿದ 115 ಮಂದಿಯ ಸಂಬಂಧಿಕರ ರಕ್ತದ ಮಾದರಿಗಳನ್ನು ನೀಡಲಾಗಿದೆ. ಅವರ ಕ್ರಾಸ್ ಮ್ಯಾಚಿಂಗ್ ಪೂರ್ಣಗೊಂಡಾಗ ಮಾತ್ರ ಕಾಣೆಯಾದವರು ಯಾರು ಎಂದು ಗುರುತಿಸಲು ಸಾಧ್ಯವಾಗುತ್ತದೆ. ಆ ಬಳಿಕವಷ್ಟೇ ಪಟ್ಟಿ ಪೂರ್ಣಗೊಳ್ಳಲಿದೆ ಎಂದು ಕಂದಾಯ ಸಚಿವರು ತಿಳಿಸಿರುವರು.