ಕಾಸರಗೋಡು: ಜಿಲ್ಲೆಯ ಅತ್ಯುತ್ತಮ ಪೊಲೀಸ್ ಅಧಿಕಾರಿಯಾಗಿ ಹೊಸದುರ್ಗ ಪೊಲೀಸ್ ಇನ್ಸ್‍ಪೆಕ್ಟರ್ ಪಿ. ಅಜಿತ್ ಕುಮಾರ್ ಅವರು ಆಯ್ಕೆಯಾಗಿದ್ದಾರೆ. ಜುಲೈ ತಿಂಗಳಲ್ಲಿ ಇವರು ನಡೆಸಿರುವ ಕಾರ್ಯಾಚರಣೆ ಪರಿಗನಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್ ಅವರು ಉತ್ತಮ ಅಧಿಕಾರಿಯಾಗಿ ಆಯ್ಕೆ ಮಾಡಿದ್ದಾರೆ.
ಮಾದಕ ವಸ್ತು ವಇರುದ್ಧ ಕಾಯಚರಣೆಯಲ್ಲಿ ದಿಟ್ಟ ಕ್ರಮ, ತಲೆಮರೆಸಿಕೊಮಡಿದ್ದ ಹಲವು ಮಂದಿ ಆರೋಪಿಗಳ ಬಂಧನ, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಕೈಗೊಂಡ ಕ್ರಮ, ಕಳ್ಳರ ಪತ್ತೆಹಚ್ಚಿ ಸೆರೆಹಿಡಿಯುವಲ್ಲಿನ ಚಾಕಚಕ್ಯತೆ ಆಧಾರವಾಗಿರಿಸಿ ಈ ಆಐಕೆ ನಡೆಸಲಾಗಿದೆ. ಕಾಸರಗೋಡು ನಗರಠಾಣೆಯಲ್ಲಿ ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಸ್ಪೆಶ್ಯಲ್ ಬ್ರಾಂಚ್‍ಗೆ ವರ್ಗಾವಣೆಗೊಮಡಿದ್ದು, ಇತ್ತೀಚೆಗಷ್ಟೆ ಹೊಸದುರ್ಗ ಪೊಲೀಸ್ ಇನ್ಸ್‍ಪೆಕ್ಟರ್ ಆಗಿ ವರ್ಗಾವಣೆಗೊಂಡಿದ್ದರು.