ಕಾಸರಗೋಡು: ವಿದ್ಯಾನಗರದ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಎಸ್‍ಎಫ್‍ಐ-ಎಂಎಸ್‍ಎಫ್ ವಿದ್ಯಾರ್ಥಿ ಸಂಘಟನೆಗಳಿಗೆ ಸೇರಿದ ವಿದ್ಯಾರ್ಥಿಗಳ ತಂಡದ ಮಧ್ಯೆ ನಡೆದ ಘರ್ಷಣೆಯಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಕಾಲೇಜು ವಿದ್ಯಾರ್ಥಿಗಳು ಹಾಗೂ ಎಸ್‍ಎಫ್‍ಐ ಸಂಘಟನೆ ಸದಸ್ಯರಾದ ಕೋಯಿಕ್ಕೋಡ್ ಕೂಡಿಯಾತ್ತೂರ್ ನಿವಾಸಿ ಅನ್ಸಲ್ ಮಹಮ್ಮದಾಲಿ, ವೈಶಾಕ್, ವಿಷ್ಣುಮೋಹನನ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಇಕಿತ್ಸೆ ಪಡೆದರು. ಪ್ರಕರಣಕ್ಕೆ ಸಂಬಂದಿಸಿ ಎಂಎಸ್‍ಎಫ್ ಸದಸ್ಯರಾದ ಗಸ್ವಾನ್, ಫರ್ಹಾನ್, ಕಬೀರ್ ಸಏರಿದಂತೆ ಏಳು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಾಲೇಜಿನ ಶೌಚಗೃಹ ಮುಚ್ಚಿರುವುದನ್ನು ಪ್ರಶ್ನಿಸಿದಾಗ ಎಂಎಸ್‍ಎಫ್ ಕಾರ್ಯಕರ್ತರು ಹಲ್ಲೆ ನಡೆಸಿರುವುದಾಗಿ ಗಾಯಾಳುಗಳು ದೂರಿದ್ದಾರೆ.