ಕುಂಬಳೆ: ಕಂಬಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದು ದೇವಾಲಯದ ಗೋಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜನ್ ದೈವ ಜಟಾಧಾರಿ ದೈವದ ಗುಡಿಗೆ ದಾರಂದ ಮೂಹೂರ್ತ ನಡೆಯಿತು.
ಕಂಬಾರು ಶ್ರೀ ದೇವಾಲಯದ ಅರ್ಚಕ ವೇದಮೂರ್ತಿ ತ್ರಿಮೂರ್ತಿ ದತ್ತಾತ್ರೇಯ ಅವರು ದಾರಂದಕ್ಕೆ ಪೂಜೆ ನೆರವೇರಿಸಿದರು. ಮೊಕ್ತೇಸರ ನೆರಿಯ ಹೆಗಡೆ ಲಕ್ಷ್ಮೀನಾರಾಯಣ ಭಟ್ ಪ್ರಾರ್ಥಿಸಿ ದಾರಂದ ಇರಿಸಲಾಯಿತು.
ಈ ಸಂದರ್ಭದಲ್ಲಿ ಮೊಕ್ತೇಸರ ರವಿಶಂಕರ ಭಟ್ ಎಡಕ್ಕಾನ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಸತೀಶ್ಚಂದ್ರ ಭಂಡಾರಿ ಕೋಳಾರು, ಎಲ್ಲ ಸಮಿತಿಗಳ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಜಟಾಧಾರಿ ಗುಡಿಯ ಸೇವಾದಾರರಾದ ಬೆಳ್ಳೂರು ಗುತ್ತು ಡಾ. ತಿಮ್ಮಪ್ಪ ಶೆಟ್ಟಿ- ಸುಲೋಚನ ತಿಮ್ಮಪ್ಪ ಶೆಟ್ಟಿ ಹಾಗೂ ಬಾಡೂರು ಗುತ್ತು ಡಾ. ಕುಶಲ ಶೆಟ್ಟಿ ಅವರಿಗೆ ವಿಶೇಷವಾಗಿ ಗೌರವಿಸಿ, ಪ್ರಾರ್ಥಿಸಿ ಶ್ರೀ ದೇವರ ಹಾಗೂ ದೈವಗಳ ಪ್ರಸಾದವನ್ನು ನೀಡಲಾಯಿತು.