HEALTH TIPS

ವಯನಾಡ್ ದುರಂತ: ಜೀವನದಿ ಚಾಲಿಯಾರ್‌ನಲ್ಲಿ ತೇಲಿ ಬರುತ್ತಿರುವ ಮೃತದೇಹಗಳು

 ಯನಾಡ್‌: ಕೇರಳದ ಮೂರು ಜಿಲ್ಲೆಗಳ ಜೀವನದಿಯಾಗಿರುವ 'ಚಾಲಿಯಾರ್' ವಯನಾಡ್‌ ದುರಂತದ ಬಳಿಕ ವಿನಾಶ ಹೊತ್ತು ತರುವ ಸಂಕೇತವಾಗಿ ಬದಲಾಗಿದೆ.

ವಯನಾಡ್‌, ಮಲಪ್ಪುರಂ ಹಾಗೂ ಕೋಯಿಕ್ಕೋಡ್ ಜಿಲ್ಲೆಯ ಜನರ ಜೀವಾಳವಾಗಿದ್ದ ನದಿ ಈಗ ದುಃಖದ ಕಡಲಾಗಿ ಮಾರ್ಪಟ್ಟಿದೆ. ಪಶ್ಚಿಮ ಘಟ್ಟಗಳ ಎರಡು ಪ್ರಮುಖ ಉಪನದಿಗಳ ಸಂಗಮದಿಂದ ರೂಪುಗೊಳ್ಳುವ ಈ ನದಿಯಲ್ಲಿ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಶವಗಳು ತೇಲಿ ಬರುತ್ತಿವೆ.

ಹೀಗೆ ಬರುತ್ತಿರುವ ದೇಹಗಳನ್ನು ನೌಕಾಪಡೆ, ಪೊಲೀಸರು, ಅಗ್ನಿ ಶಾಮಕ, ಎನ್‌ಡಿಆರ್‌ಎಫ್‌ ಹಾಗೂ ಸ್ಥಳೀಯರು ಸೇರಿ ಹಲವು ರಕ್ಷಣಾ ತಂಡಗಳು ಹೊರತೆಗೆಯುತ್ತಿವೆ. ಶನಿವಾರ ಮತ್ತೆ ಮೂರು ದೇಹಗಳು ಹಾಗೂ 13 ದೇಹದ ಭಾಗಗಳನ್ನು ಹೊರತೆಗೆಯಲಾಗಿದೆ. ಅಲ್ಲಿಗೆ ಚಾಲಿಯಾರ್‌ ನದಿಯಿಂದ ಹೊರತೆಗೆಯಲಾದ ದೇಹಗಳ ಸಂಖ್ಯೆ 73ಕ್ಕೆ ಹಾಗೂ ದೇಹದ ಭಾಗಗಳ ಸಂಖ್ಯೆ 132ಕ್ಕೆ ಏರಿಕೆಯಾಗಿದೆ. ಎರಡರ ಒಟ್ಟು ಮೊತ್ತ 205.

ಈ ಪೈಕಿ 37 ಪುರುಷರು, 29 ಮಹಿಳೆಯರು, 3 ಬಾಲಕರು ಹಾಗೂ 4 ಬಾಲಕಿಯರ ಮೃತದೇಹಗಳಿವೆ ಎಂದು ಮಲಪ್ಪುರಂ ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪೈಕಿ 198 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮುಂದಿನ ಪ್ರಕ್ರಿಯೆಗೆ 195 ದೇಹಗಳನ್ನು ವಯನಾಡ್‌ಗೆ ರವಾನಿಸಲಾಗಿದೆ.

ಚಾಲಿಯಾರ್ ನದಿಯ 40 ಕಿ.ಮಿ ವ್ಯಾಪ್ತಿಯಲ್ಲಿ ಶೋಧ ಕಾರ್ಯಚರಣೆ ಮುಂದುವರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries