ಬದಿಯಡ್ಕ: ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾಸಂಘ ನೀರ್ಚಾಲು ಇವರ ನೇತೃತ್ವದಲ್ಲಿ ಅಗ್ರಮಾನ್ಯ ಕಲಾವಿದರ ಕೂಡುವಿಕೆಯ ಯಕ್ಷಗಾನ ತಾಳಮದ್ದಳೆ ಭಾನುವಾರ ನೀರ್ಚಾಲು ಶಾಲಾ ಸಭಾಂಗಣದಲ್ಲಿ ನಡೆಯಿತು. ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಉದ್ಘಾಟಿಸಿದರು. ಊರ್ವಶಿ ಶಾಪ, ಉತ್ತರನ ಪೌರುಷ ಕಥಾಭಾಗದಲ್ಲಿ ಭಾಗವತರಾಗಿ ಬಲಿಪ ಶಿವಶಂಕರ ಭಟ್, ಚಿನ್ಮಯ ಭಟ್ ಕಲ್ಲಡ್ಕ, ಚೆಂಡೆ ಮದ್ದಳೆಯಲ್ಲಿ ಗಣೇಶ್ ಭಟ್ ಬೆಳಾಲು, ಲಕ್ಷ್ಮೀಶ ಬೇಂಗ್ರೋಡಿ ಜೊತೆಗೂಡಿದರು. ಪ್ರಸಿದ್ಧ ಅರ್ಥದಾರಿಗಳಾದ ಸುಣ್ಣಂಬಳ ವಿಶ್ವೇಶ್ವರ ಭಟ್, ಉಜಿರೆ ಅಶೋಕ ಭಟ್, ಪವನ್ ಕಿರಣ್ಕೆರೆ, ಪಕಳಕುಂಜ ಶ್ಯಾಂಭಟ್, ರಾಧಾಕೃಷ್ಣ ಕಲ್ಚಾರು, ವೈಕುಂಠ ಹೇರ್ಳೆ, ಬಾಲಕೃಷ್ಣ ಆಚಾರ್ಯ ನೀರ್ಚಾಲು ಪಾತ್ರನಿರ್ವಹಣೆಯಲ್ಲಿ ಗಮನಸೆಳೆದರು. ಸತ್ಯಶಂಕರ ಭಟ್ ಸ್ವಾಗತಿಸಿದರು.