ಉಪ್ಪಳ: ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್(ಕೆ.ಪಿ.ಎಸ್.ಟಿ.ಎ) ಮಂಜೇಶ್ವರ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸ್ವದೇಶ್ ಮೇಘ ಕ್ವಿಜ್ 2024 ಸ್ಪರ್ಧೆ ಮುಳಿಂಜ ಜಿ. ಎಲ್.ಪಿ. ಶಾಲೆಯಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ ಪಿ ಎಸ್ ಟಿ ಎ ಯ ಉಪಜಿಲ್ಲಾ ಅಧ್ಯಕ್ಷ ಇಸ್ಮಾಯಿಲ್ ಮಿಯಪದವು ವಹಿಸಿದ್ದರು. ಕಂದಾಯ ಜಿಲ್ಲಾ ಜೊತೆ ಕಾರ್ಯದರ್ಶಿ ಜನಾರ್ದನನ್ ಕೆ .ವಿ. ಉದ್ಘಾಟಿಸಿದರು. ವಿದ್ಯಾಭ್ಯಾಸ ಜಿಲ್ಲಾ ಅಧ್ಯಕ್ಷ ವಿಮಲ್ ಅಡಿಯೋಡಿ ಮುಖ್ಯ ಭಾಷಣಮಾಡಿದರು. ಕೆ ಪಿ ಎಸ್ ಟಿ. ಎ ಅಲ್ಪಸಂಖ್ಯಾತ ಸೆಲ್ ಕಾರ್ಯದರ್ಶಿ ಜಬ್ಬಾರ್.ಬಿ, ವಿದ್ಯಾಭ್ಯಾಸ ಜಿಲ್ಲಾ ಸಮಿತಿ ಸದಸ್ಯೆ ಸೌಮ್ಯ ಪಿ, ಉದ್ಯಾವರ ತೋಟ ಜಿ ಎಂ ಎಲ್ ಪಿ ಶಾಲೆಯ ರವಿಶಂಕರ.ಕೆ ಶುಭಾಶಂಸನೆಗೈದರು. ಉಪಜಿಲ್ಲಾ ಕಾರ್ಯದರ್ಶಿ ಒ.ಎಮ್ ರಶೀದ್ ಸ್ವಾಗತಿಸಿ, ಜೊತೆಕಾರ್ಯದರ್ಶಿ ಅಬೂಬಕ್ಕರ್ ಕುರುಡಪದವು ವಂದಿಸಿದರು.
ಸ್ವದೇಶ್ ಮೆಘಾ ಕ್ವಿಜ್ ಕಿರಿಯ, ಹಿರಿಯ ಪ್ರಾಥಮಿಕ ಹೈಸ್ಕೂಲು ಹಾಗೂ ಹೈಯರ್ ಸೆಕೆಂಡರಿ ವಿಭಾಗದಲ್ಲಿ ನಡೆಸಲಾಗಿತ್ತು. ಹಲವಾರು ಮಕ್ಕಳು ಭಾಗವಹಿಸಿದ್ದರು. ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸ್ಥಾನ: ಶ್ರೀಯನ್ಸ್ ರೈ ಡಿ ಬಿ ಎ ಯು ಪಿ ಎಸ್ ಕಯ್ಯಾರು, ದ್ವಿತೀಯ ಸ್ಥಾನ ಅನ್ಶಿ ಎಸ್ ಎಸ್ ಎ ಎಲ್ ಪಿ ಎಸ್ ಕನಿಯಾಲ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ: ತನ್ವಿ ಎಸ್ ಎಸ್ ಬಿ ಎ ಯು ಪಿ ಶಾಲೆ ಐಲ, ದ್ವಿತೀಯ: ಫಾತಿಮಾತುಲ್ ಬತೂಲ್ ಎಸ್ ಎಸ್ ಬಿ ಎ ಯು ಪಿ ಶಾಲೆ ಐಲ ಪಡೆದುಕೊಂಡರು. ಹೈಸ್ಕೂಲು ವಿಭಾಗದಲ್ಲಿ ಪ್ರಥಮ: ಪೂಜಾ ಲಕ್ಷ್ಮಿ ಕೆ. ಪಿ., ಎಸ್. ಎ. ಟಿ ಎಚ್. ಎಸ್. ಎಸ್. ಮಂಜೇಶ್ವರ, ದ್ವಿತೀಯ: ಆಯಿಷಾ ಅಪ್ನಾ, ಜಿ ಎಚ್ ಎಸ್ ಕಡಂಬಾರು, ಹೈಯರ್ ಸೆಕೆಂಡರಿ ವಿಭಾಗದಲ್ಲಿ ಪ್ರಥಮ: ವಿಲ್ಸನ್ ಡಿಸೋಜ ಜಿ.ಎಚ್.ಎಸ್.ಎಸ್ ಪೈವಳಿಕೆ ನಗರ, ದ್ವಿತೀಯ ಧನ್ಯಶ್ರೀ ಎನ್ ಎಸ್ ಜಿ ಎಚ್ ಎಸ್ ಎಸ್ ಪೈವಳಿಕೆ ನಗರ ಪಡೆದುಕೊಂಡರು. ವಿಜೇತರಿಗೆ ಪ್ರಮಾಣ ಪತ್ರ ಹಾಗೂ ಶಾಶ್ವತ ಫಲಕ ನೀಡಿ ಗೌರವಿಸಲಾಯಿತು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಸ್ಪರ್ದಾಳುಗಳು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡರು.