ಕೊಚ್ಚಿ: ಮಹಿಳೆ ತನ್ನ ಇಚ್ಛೆಗೆ ವಿರುದ್ಧವಾಗಿ ವೈವಾಹಿಕ ಜೀವನ ಮುಂದುವರಿಸುವAತೆ ಸೂಚಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ. ಮದುವೆಯಲ್ಲಿನ ಕ್ರೌರ್ಯದ ಕೃತ್ಯಗಳಲ್ಲಿ ನಿರಂತರ ನಿರ್ಲಕ್ಷ್ಯ, ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ನ್ಯಾಯಸಮ್ಮತವಲ್ಲದ ನಡವಳಿಕೆ, ತಿರಸ್ಕಾರ, ತೀವ್ರ ಅಸೂಯೆ, ಸ್ವಾರ್ಥ ಮತ್ತು ದೀರ್ಘಕಾಲದ ದುರ್ವರ್ತನೆಯಿಂದ ಉಂಟಾಗುವ ನಡವಳಿಕೆ ಸೇರಿವೆ ಎಂದು ಹೈಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿ ದೇವನ್ ರಾಮಚಂದ್ರನ್, ನ್ಯಾಯಮೂರ್ತಿ ಸಿ. ಪ್ರದೀಪ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠದಿಂದ ಈ ಆದೇಶ ಹೊರಬಿದ್ದಿದೆ.
14 ವರ್ಷಗಳಿಂದ ಪತಿಯಿಂದ ಬೇರ್ಪಟ್ಟಿರುವ ಆಲಪ್ಪುಳದ ಮಾವೇಲಿಕ್ಕರದ ವಿಚ್ಛೇದನ ಅರ್ಜಿಗೆ ಅನುಮತಿ ನೀಡಿದ ಆದೇಶದಲ್ಲಿ ಈ ವಿಷಯ ತಿಳಿಸಲಾಗಿದೆ. ವಿಚ್ಛೇದನ ಅರ್ಜಿಯನ್ನು ಆಲಪ್ಪುಳ ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿದ ನಂತರ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. 17 ನೇ ವಯಸ್ಸಿನಲ್ಲಿ, ಅರ್ಜಿದಾರರು ವಿವಾಹಿತ ಮತ್ತು ಒಂದು ಮಗುವಿನ ತಂದೆಯಾದ ಮಾವೇಲಿಕ್ಕರ ಸ್ಥಳೀಯರೊಂದಿಗೆ ಸಂಬAಧ ಬೆಳೆಸಿದ್ದರು. ಬಳಿಕ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದು ಅರ್ಜಿದಾರರನ್ನು ವಿವಾಹವಾದರು.
ಮದ್ಯವ್ಯಸನಿ ಹಾಗೂ ಇತರೆ ಸಂಬAಧಗಳನ್ನು ಹೊಂದಿದ್ದ ತನ್ನ ಪತಿ ತನ್ನನ್ನು ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಥಳಿಸಿ ತನ್ನ ಕೋಣೆಯಲ್ಲಿ ಬೀಗ ಜಡಿಯುತ್ತಿದ್ದ. ಬಳಿಕ ಅರ್ಜಿದಾರರು ತನ್ನ ಸ್ವಂತ ಮನೆಗೆ ಮರಳಿದರು. ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಯಿತು. ಕೌಟುಂಬಿಕ ಜೀವನದಲ್ಲಿ ಸಾಮಾನ್ಯವಾಗಿರುವ ದೂರವಾಗಿ ಬದುಕುವ ಗಂಭೀರ ಸಮಸ್ಯೆಗಳನ್ನು ಪರಿಗಣಿಸಿ ಕೌಟುಂಬಿಕ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತ್ತು. ಆ ಬಳಿಕ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ವೈವಾಹಿಕ ಜೀವನದಲ್ಲಿ ಕ್ರೌರ್ಯವನ್ನು ಸಂಖ್ಯೆಗಳ ಆಧಾರದಲ್ಲಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸೂಚಿಸಿದೆ.