ಕಾಸರಗೋಡು: ಅಸೌಖ್ಯಬಾಧಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಂಬತ್ತು ತಿಂಗಳ ಗರ್ಭಿಣಿ ಮೃತಪಟ್ಟ ಘಟನೆ ಕುಂಬಳೆಯಲ್ಲಿ ನಡೆದಿದೆ. ಕುಂಬಳೆ ಅಂಗಡಿಮೊಗರು ಮಂಟಪ್ಪಾಡಿ ನಿವಾಸಿ ಶಂಕರ ಪಾಟಾಳಿ-ಲಲಿತಾ ದಂಪತಿ ಪುತ್ರಿ, ಪಾಕಂ ನಿವಾಸಿ, ದಾಮೋದರನ್ ಎಂಬವರ ಪತ್ನಿ ಗೀತಾ(38)ಮೃತಪಟ್ಟ ಗೃಹಿಣಿ.
ಸೋಮವಾರ ಗೀತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂದರ್ಭ ಸ್ಕ್ಯಾನಿಂಗ್ ನಡೆಸಿದಾಗ ಗರ್ಭದೊಳಗಿನ ಶಿಶು ಮೃತಪಟ್ಟಿರುವುದು ಖಚಿತಗೊಂಡ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೆ ಮುಂದಾಗುತ್ತಿದ್ದಂತೆ ಮಹಿಳೆಯೂ ಮೃತಪಟ್ಟಿದ್ದಾರೆ. ಹೃದಯಾಘಾತ ಸಾವಿಗೆ ಕಾರಣವೆನ್ನಲಾಗಿದೆ.