HEALTH TIPS

ಮೊಬೈಲ್ 'ನಲ್ಲಿ ಡಿಲೀಟ್ ಆದ ಫೋಟೋ, ವೀಡಿಯೊಗಳನ್ನು ರಿಕವರಿ ಮಾಡುವುದು ಹೇಗೆ..? ಇಲ್ಲಿದೆ ಟ್ರಿಕ್ಸ್

 ಸ್ಮಾರ್ಟ್ಫೋನ್ ಕಂಪನಿಗಳು ತಮ್ಮ ಗ್ರಾಹಕರಿಗೆ ಅನೇಕ ಸ್ಮಾರ್ಟ್ಫೋನ್ ಮೊಬೈಲ್ ನೀಡುತ್ತಿದೆ. ಆಂಡ್ರಾಯ್ಡ್ ಫೋನ್ ಗಳು ಕಳೆದ ಕೆಲವು ವರ್ಷಗಳಲ್ಲಿ ಬಹಳ ಜನಪ್ರಿಯವಾಗಿವೆ.ಇದಕ್ಕೆ ಸರಳ ಕಾರಣವೆಂದರೆ ಇದು ಬಳಸಲು ತುಂಬಾ ಸುಲಭ ಮತ್ತು ಕಡಿಮೆ ಬಜೆಟ್ ನಲ್ಲಿ ಸಿಗುತ್ತದೆ.

ಕೆಲವೊಮ್ಮೆ ನಾವು ಗೊತ್ತಿಲ್ಲದೇ ಅಪ್ಲಿಕೇಶನ್ ಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಡಿಲೀಟ್ ಮಾಡುತ್ತೇವೆ.ನಿಮ್ಮ ಆಂಡ್ರಾಯ್ಡ್ ಫೋನ್ ನಿಂದ ಫೈಲ್ ಗಳು, ಅಪ್ಲಿಕೇಶನ್ ಗಳು ಅಥವಾ ಚಿತ್ರಗಳನ್ನು ಅಳಿಸುವುದು ಸುಲಭ, ಆದರೆ ಅಳಿಸಿದ ಫೋಟೋಗಳನ್ನು ಮರುಪಡೆಯುವಲ್ಲಿ ಸ್ವಲ್ಪ ಸಮಸ್ಯೆ ಇದೆ. ಅಂತಹ ಪರಿಸ್ಥಿತಿಯಲ್ಲ trash can ಬಳಸಿ

ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿ ನಿಮ್ಮ ಅಳಿಸಿದ ಫೋಟೋಗಳು / ವೀಡಿಯೊಗಳನ್ನು ನೀವು ರಿಡೀಮ್ ಮಾಡಬಹುದು ಅಥವಾ ಮರುಪಡೆಯಬಹುದು. ಇದಕ್ಕಾಗಿ, ನೀವು ನಿಮ್ಮ ಆಂಡ್ರಾಯ್ಡ್ ನಲ್ಲಿ trash can ಬಳಸಬಹುದು. ನಿಮ್ಮ ಫೋನ್ ನಲ್ಲಿ ಗ್ಯಾಲರಿ ಅಪ್ಲಿಕೇಶನ್ ವಿಭಾಗದಲ್ಲಿ ನೀವು ಡಿಲೀಟ್ ಆದ ಫೋಟೋಗಳನ್ನು ಕಾಣಬಹುದು.

ಮೊದಲನೆಯದಾಗಿ, ನಿಮ್ಮ ಗ್ಯಾಲರಿ ಅಪ್ಲಿಕೇಶನ್ ತೆರೆಯಿರಿ.
ಇದರ ನಂತರ ಈಗ ಸೆಟ್ಟಿಂಗ್ಸ್ ಗೆ ಹೋಗಿ.
ಈಗ trash ಫೋಲ್ಡರ್ ಗೆ ಹೋಗಿ ಮತ್ತು ಅದನ್ನು ಪರಿಶೀಲಿಸಿ.
trash ಫೋಲ್ಡರ್ ನಲ್ಲಿ, ನಿಮ್ಮ ಫೋನ್ ನಿಂದ ನೀವು ಆರಂಭದಲ್ಲಿ ಅಳಿಸಿದ ಎಲ್ಲಾs ಚಿತ್ರಗಳನ್ನು ನೀವು ಕಾಣಬಹುದು.

ಅಥವಾ

ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಗೂಗಲ್ ಪ್ಲೇ ಸ್ಟೋರ್ನಿಂದ DiskDigger ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿ. ನಂತರ ಈ ಅಪ್ಲಿಕೇಶನ್ ತೆರೆಯಿರಿ. ಇಲ್ಲಿ ನಿಮಗೆ ಎರಡು ಆಯ್ಕೆಗಳನ್ನ ತೋರಿಸಲಾಗುತ್ತದೆ, ಅದರಲ್ಲಿ ಮೊದಲ ಆಯ್ಕೆಯು ಫೋಟೋ ಮತ್ತು ಎರಡನೇ ಆಯ್ಕೆಯಲ್ಲಿ ನೀವು ವಿಡಿಯೋ ಕಾಣುತ್ತೀರಿ. ಇಲ್ಲಿ ಎಲ್ಲಾ ಫೋಟೋಗಳು ಮತ್ತು ವಿಡಿಯೋಗಳನ್ನು ತೋರಿಸಲಾಗುತ್ತದೆ. ಇದರಲ್ಲಿ ನೀವು ಕೆಲವು ದಿನಗಳ ಹಿಂದೆ ಡಿಲೀಟ್ ಮಾಡಿದ ಡೇಟಾವನ್ನು ಮಾತ್ರ ಮರಳಿ ಪಡೆಯಬಹುದು.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries