ಡೆಹ್ರಾಡೂನ್: ಉತ್ತರಾಖಂಡದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ ಭಾರಿ ಮಳೆ, ಭೂಕುಸಿತ; ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
0
ಆಗಸ್ಟ್ 11, 2024
Tags
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ಚಮೋಲಿ ಜಿಲ್ಲೆಯ ಹಲವೆಡೆ ಭೂಕುಸಿತ ಉಂಟಾಗಿದ್ದು, ಬದರಿನಾಥ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಭೂಕುಸಿತ ಉಂಟಾಗಿ ಬೆಟ್ಟಗಳಿಂದ ಕಲ್ಲುಗಳು ಉರುಳಿ ರಸ್ತೆಗಳ ಮೇಲೆ ಬಿದ್ದಿರುವ ಪರಿಣಾಮ ನಂದಪ್ರಯಾಗ ಮತ್ತು ಚಿಂಕಾದಲ್ಲಿ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕಚೇರಿ ತಿಳಿಸಿದೆ.
ಈಚೆಗೆ ಕೇದಾರನಾಥದ ಬಳಿಯ ಲಿಂಚೋಲಿಯಲ್ಲಿನ ಶಿಬಿರದಲ್ಲಿ ಭೂಕುಸಿತ ಸಂಭವಿಸಿತ್ತು. ನೇಪಾಳದ 26 ವರ್ಷದ ಕಲು ಬಹದ್ದೂರ್ ಎಂಬುವವರು ಮೃತಪಟ್ಟಿದ್ದರು. ಋಷಿಕೇಶದ ಶಿವಮಂದಿರ ಮತ್ತು ಮೀರಾನಗರ ಪ್ರದೇಶಗಳ ಬಳಿ ಹೊಳೆಗಳಲ್ಲಿ ಎರಡು ಶವಗಳು ಪತ್ತೆಯಾಗಿದ್ದವು.
ಪೌರಿ ಜಿಲ್ಲೆಯ ಲಕ್ಷ್ಮಣಜುಲಾ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ನಾಲ್ಕೈದು ಜನರು ಕಾಣೆಯಾಗಿದ್ದರು.