ಬದಿಯಡ್ಕ: ಸಿಂಹ ಮಾಸದ ಮೊದಲ ದಿನ(ಆ. 17)ವನ್ನು ಕೇರಳಾದ್ಯಂತ ಕೃಷಿಕರ ದಿನವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಬದಿಯಡ್ಕ ಕೃಷಿ ಭವನ ಹಾಗೂ ಬದಿಯಡ್ಕ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಕೃಷಿಕರ ದಿನವನ್ನು ಕುಟುಂಬಶ್ರೀ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಸಮಾರಂಭ ಉದ್ಘಾಟಿಸಿದರು. ಬದಿಯಡ್ಕ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಮ್ಯ ಮಹೇಶ್ ಅಧ್ಯಕ್ಷತೆ ವಹಿಸಿದರು.
ಪಂಚಾಯಿತಿ ಸದಸ್ಯರಾದ ಶ್ಯಾಮ ಪ್ರಸಾದ್ ಮಾನ್ಯ, ಈಶ್ವರ್ ನಾಯ್ಕ, ಹಮೀದ್ ಪಳ್ಳತಡ್ಕ, ಶುಭಲತ ರೈ, ಜುಬೈದ, ಕಾಸರಗೋಡು ಮಾರ್ಕೆಟಿಂಗ್ ಸೊಸೈಟಿ ನೀರ್ಚಾಲು ಅಧ್ಯಕ್ಷ ಪದ್ಮರಾಜ್ ಪಟ್ಟಾಜೆ, ವಿವಿಧ ರಾಜಕೀಯ ಪಕ್ಷದ ಮುಖಂಡರು ಹಾಗೂ ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಸಂದರ್ಭ ಕೃಷಿಕರಾದ ಶಿವಪ್ರಸಾದ್ ಹೊಸಮನೆ, ನಸೀರ್ ಪಿ ಪಳ್ಳತಡ್ಕ, ವಿನಯಕುಮಾರಿ ಪೆರಡಾಲ, ಜೋಸ್ಮಿನ್ ಕ್ರಾಸ್ತಾ ಕಾರ್ಮಾರು, ದಾಮೋದರ ಮುನಿಯೂರು, ಮುಹಮ್ಮದ್ ಹಾಜಿ ಕುಂಜಾರು, ಈಶ್ವರ ನಾಯ್ಕ ಕುಂಟಾಲುಮೂಲೆ, ಜಾನಿ ಕ್ರಾಸ್ತಾ ಕಾರ್ಮಾರು, ಅನಿಲ್ ಕುಮಾರ್ ಪ್ರಭು ಅವರಿಗೆ ಉತ್ತಮ ಕೃಷಿಕ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿ ಕೃಷಿಕನಿಗೆ ಇರುವ ಪುರಸ್ಕಾರವನ್ನು ನವಜೀವನ ಹೈಯರ್ ಸೆಕೆಂಡರಿ ಶಾಲೆಯ ವೈಶಾಖ್ ಮೇಗಿನ ಕಡಾರು ಅವರಿಗೆ ನೀಡಲಾಯಿತು.
ಶೋಭಾ ಕೆ ಪ್ರಾರ್ಥನೆ ಹಾಡಿದರು.ಕೃಷಿ ಅಧಿಕಾರಿ ಬಿಂದು ಜಾರ್ಜ್ ಸ್ವಾಗತಿಸಿದರು. ರವೀಂದ್ರ ಟಿ.ವಿ ವಂದಿಸಿದರು.