ವಯನಾಡು: ಭೂಕುಸಿತದಿಂದ ಜಿಲ್ಲೆಯ ವಿವಿಧ ಪರಿಹಾರ ಶಿಬಿರಗಳಲ್ಲಿ ತಂಗಿರುವ ಜನರ ಖಾಸಗಿತನದ ದೃಷ್ಟಿಯಿಂದ ಶಿಬಿರಗಳಿಗೆ ಅನಗತ್ಯ ಭೇಟಿ ನೀಡುವುದನ್ನು ತಪ್ಪಿಸುವಂತೆ ಸಚಿವ ಮೊಹಮ್ಮದ್ ರಿಯಾಝ್ ತಿಳಿಸಿದ್ದಾರೆ. ಶಿಬಿರಗಳನ್ನು ಮನೆಗಳಂತೆ ಪರಿಗಣಿಸಬೇಕು ಎಂದಿರುವರು.
ಶಿಬಿರದಲ್ಲಿರುವವರು ತೀವ್ರ ಮಾನಸಿಕ ಸಂಕಷ್ಟದಲ್ಲಿದ್ದಾರೆ. ಶಿಬಿರಗಳಿಗೆ ಬರುವುದನ್ನು ಮತ್ತು ಸಂದರ್ಶನಗಳನ್ನು ತೆಗೆದುಕೊಳ್ಳುವುದನ್ನು ನಿಯಂತ್ರಿಸಿ. ಶಿಬಿರದಲ್ಲಿ ಹೆಚ್ಚಿನ ನಿಯಂತ್ರಣ ಇರುತ್ತದೆ ಎಂದು ಸಚಿವರು ತಿಳಿಸಿದರು.
ಶುಕ್ರವಾರ 14 ಮೃತದೇಹಗಳು ಪತ್ತೆಯಾಗಿವೆ. ಮಲಪ್ಪುರಂ ಜಿಲ್ಲೆಯಲ್ಲಿ ಮೂರು ಮತ್ತು ವಯನಾಡಿನ ವಿಪತ್ತು ವಲಯದಲ್ಲಿ 11 ಪತ್ತೆಯಾಗಿವೆ. ಶಾಲೆಯ ಸ್ಥಳವೊಂದರಿAದಲೇ ಎಂಟು ಮೃತದೇಹಗಳು ಪತ್ತೆಯಾಗಿವೆ. ನಾಲ್ವರನ್ನು ಜೀವಂತವಾಗಿ ರಕ್ಷಿಸಲಾಗಿದೆ. ಸದ್ಯ 597 ಕುಟುಂಬಗಳು ಶಿಬಿರದಲ್ಲಿವೆ. ಚುರಲ್ಮಲಾ ಮತ್ತು ಮುಂಡಕೈ ದುರಂತಕ್ಕೆ ಸಂಬAಧಿಸಿದAತೆ 17 ಶಿಬಿರಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು 2303 ಮಂದಿ ಶಿಬಿರಗಳಲ್ಲಿ ತಂಗಿದ್ದಾರೆ ಎಂದು ಸಚಿವ ಮೊಹಮ್ಮದ್ ರಿಯಾಜ್ ತಿಳಿಸಿದ್ದಾರೆ.
ಶಿಬಿರಗಳಲ್ಲಿ ಸಾಕಷ್ಟು ಅಗತ್ಯ ಸಾಮಾಗ್ರಿಗಳಿವೆ. ಕೊಡುಗೆಗಳನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಬೇಕು ಎಂದು ಮೊಹಮ್ಮದ್ ರಿಯಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.