ನವದೆಹಲಿ: ಜೈಲಿನಲ್ಲಿರುವ ಸಂಸದ ಶೇಕ್ ಅಬ್ದುಲ್ ರಶೀದ್ ಸಲ್ಲಿಸಿರುವ ಜಾಮೀನು ಅರ್ಜಿ ಕುರಿತು ಪ್ರತಿಕ್ರಿಯಿಸುವಂತೆ ದೆಹಲಿ ನ್ಯಾಯಾಲಯವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೋಟಿಸ್ ನೀಡಿದೆ.
ನವದೆಹಲಿ: ಜೈಲಿನಲ್ಲಿರುವ ಸಂಸದ ಶೇಕ್ ಅಬ್ದುಲ್ ರಶೀದ್ ಸಲ್ಲಿಸಿರುವ ಜಾಮೀನು ಅರ್ಜಿ ಕುರಿತು ಪ್ರತಿಕ್ರಿಯಿಸುವಂತೆ ದೆಹಲಿ ನ್ಯಾಯಾಲಯವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೋಟಿಸ್ ನೀಡಿದೆ.
ಇಂಜಿನಿಯರ್ ರಶೀದ್ ಎಂದೇ ಪ್ರಸಿದ್ಧರಾಗಿರುವ ಕಾಶ್ಮೀರಿ ನಾಯಕ ರಶೀದ್ ಅವರನ್ನು, ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ, ಭಯೋತ್ಪಾದನೆಗೆ ಹಣ ಒದಗಿಸಿದ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಪ್ರಕರಣದಲ್ಲಿ 2017ರಲ್ಲಿ ಬಂಧಿಸಲಾಯಿತು.
2024ರ ಲೋಕಸಭೆ ಚುನಾವಣೆಯಲ್ಲಿ ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಶೀದ್ ಜೈಲಿನಲ್ಲಿದ್ದೇ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದರು.
ಇದೀಗ ರಶೀದ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಛಂದೆರ್ ಜೀತ್ ಸಿಂಗ್ ಅವರು ಈ ಬಗ್ಗೆ ಸಿಬಿಐಗೆ ನೋಟಿಸ್ ನೀಡಿದ್ದು, ಆಗಸ್ಟ್ 28ರ ಒಳಗಾಗಿ ಉತ್ತರಿಸುವಂತೆ ಸೂಚಿಸಿದ್ದಾರೆ.
ಸಂಸದರಾಗಿ ಆಯ್ಕೆಯಾದ ರಶೀದ್‌ಗೆ ಪ್ರಮಾಣ ವಚನ ಸ್ವೀಕರಿಸಲು ನ್ಯಾಯಾಲಯ ಈ ಹಿಂದೆ ಜುಲೈ 5ರಂದು ಪರೋಲ್ ನೀಡಿತ್ತು.