ತಿರುವನಂತಪುರಂ: ನಕಲಿ ಗುರುತು ಚೀಟಿ ಬಳಸಿ ಮಕ್ಕಳನ್ನು ದುಡಿಸುತ್ತಿರುವುದು ಕಂಡುಬಂದಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಎನ್. ಸುನಂದಾ ಎಚ್ಚರಿಸಿದ್ದಾರೆ.
ಬಾಲಕಾರ್ಮಿಕ ಪದ್ಧತಿ ಮತ್ತು ಬಾಲ್ಯವಿವಾಹ ನಿರ್ಮೂಲನೆ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಕೊಟ್ಟಾಯಂನಲ್ಲಿ ಆಯೋಜಿಸಿದ್ದ ಕರ್ತವ್ಯ ಪಾಲಕರ ವಲಯವಾರು ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನ್ಯರಾಜ್ಯ ಕಾರ್ಮಿಕರೊಂದಿಗೆ ಬರುವ ಮಕ್ಕಳನ್ನು ಕೆಲಸದ ಸ್ಥಳಗಳಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ತೋರಿಸಲು ನಕಲಿ ಗುರುತಿನ ದಾಖಲೆಗಳನ್ನು ಬಳಸಿದ ಘಟನೆಗಳು ಗಮನಕ್ಕೆ ಬಂದಿವೆ. ಕಾನೂನು ಕಟ್ಟುನಿಟ್ಟಾಗಿ ಜಾರಿಯಾದರೆ ಮಾತ್ರ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಸಾಧ್ಯ ಎಂದಿರುವರು.
ಆಯೋಗದ ಸದಸ್ಯರಾದ ಟಿ.ಸಿ. ಜಲಜಾಮೋಳ್, ಡಾ. ಎಫ್. ವಿಲ್ಸನ್ ಮಾತನಾಡಿದರು.