HEALTH TIPS

ಗೂಗಲ್‌ ಪೇನಲ್ಲಿ ಟ್ರಾನ್ಸಾಕ್ಶನ್ ಹಿಸ್ಟರಿ ಡಿಲೀಟ್‌ ಮಾಡಬಹುದೇ?

 ದೇಶದ ಯುಪಿಐ ಪೇಮೆಂಟ್‌ ಆಪ್‌ಗಳಲ್ಲಿ ಲೀಡಿಂಗ್‌ ಸ್ಥಾನದಲ್ಲಿ ಕಾಣಿಸಿಕೊಂಡಿರುವ ಗೂಗಲ್‌ ಪೇ (Google Pay) ಅನ್ನು ಅನೇಕ ಜನರು ತಮ್ಮ ದೈನಂದಿನ ವ್ಯವಹಾರಗಳಲ್ಲಿ ಬಳಕೆ ಮಾಡುತ್ತಾರೆ. ಹಣ ಪಾವತಿ ಸೇರಿದಂತೆ ಗೂಗಲ್‌ ಪೇ ಬಿಲ್ ಪಾವತಿ, ಮೊಬೈಲ್‌ ರೀಚಾರ್ಜ್‌, ಇನ್ಶೂರೆನ್ಸ್‍, ವಿವಿಧ ಹೂಡಿಕೆ ಆಯ್ಕೆಗಳು ಹಾಗೂ ಇನ್ನಷ್ಟು ಉಪಯುಕ್ತ ಸೇವೆಗಳನ್ನು ಒಳಗೊಂಡಿದೆ. ಅಲ್ಲದೇ ತ್ವರಿತ ಪಾವತಿಗಾಗಿ QR ಕೋಡ್‌ ಸ್ಕ್ಯಾನ್‌ ಪೇಮೆಂಟ್‌ ಆಯ್ಕೆ ಸಹ ಪಡೆದಿದೆ. ಅಂದಹಾಗೆ ಗೂಗಲ್‌ ಪೇನಲ್ಲಿ ಟ್ರಾನ್ಸಾಕ್ಶನ್ ಹಿಸ್ಟರಿ ಡಿಲೀಟ್‌ ಮಾಡಬಹುದೇ?

ಗೂಗಲ್‌ ಪೇ ಆಪ್‌ ಬಳಕೆದಾರರ ವಹಿವಾಟಿನ ಹಿಸ್ಟರಿಯನ್ನು ಹೊಂದಿರುತ್ತದೆ ಹಾಗೆಯೇ ಬಳಕೆದಾರರು ಗೂಗಲ್‌ ಪೇನಲ್ಲಿ ತಮ್ಮ ವಹಿವಾಟಿನ (Transaction History) ಹಿಸ್ಟರಿ ಡಿಲೀಟ್‌ ಮಾಡಬಹುದು. ಇದಕ್ಕಾಗಿ ಎರಡು ಭಿನ್ನ ವಿಧಾನಗಳು ಇದ್ದು, ಆ ಮೂಲಕ ಬಳಕೆದಾರರು ಗೂಗಲ್‌ ಪೇ ವಹಿವಾಟಿನ ಹಿಸ್ಟರಿ ಡಿಲೀಟ್ ಮಾಡಲು ಚಾನ್ಸ್‌ ಇದೆ. ಹಾಗಾದರೇ ಗೂಗಲ್‌ ಪೇನಲ್ಲಿ ಟ್ರಾನ್ಸಾಕ್ಶನ್ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಆಪ್‌ ಮೂಲಕ ಗೂಗಲ್‌ ಪೇ ವಹಿವಾಟು ಹಿಸ್ಟರಿ ಡಿಲೀಟ್ ಮಾಡಲು ಈ ಕ್ರಮ ಅನುಸರಿಸಿ

ಹಂತ 1 : ಮೊದಲಿಗೆ ಫೋನಿನಲ್ಲಿ ಗೂಗಲ್‌ ಪ್ಲೇ ಆಪ್‌ ತೆರೆಯಿರಿ, ನಂತರ ನಿಮ್ಮ ಪ್ರೊಫೈಲ್ ವಿಭಾಗದ ಮೇಲೆ ಟ್ಯಾಪ್ ಮಾಡಿ.

ಹಂತ 2 : ಬಳಿಕ ಕೆಳಗೆ ಸ್ಕ್ರಾಲ್ ಮಾಡಿ, ಸೆಟ್ಟಿಂಗ್ಸ್‌ ಆಯ್ಕೆ ಅನ್ನು ಟ್ಯಾಪ್ ಮಾಡಿ, ಆ ನಂತರ ಪ್ರೈವಸಿ ಮತ್ತು ಸೆಕ್ಯುರಿಟಿ ಆಯ್ಕೆ ಕ್ಲಿಕ್‌ ಮಾಡಿ

ಹಂತ 3 : ತದ ನಂತರ Data and Personalization ಆಯ್ಕೆ ಸೆಲೆಕ್ಟ್‌ ಮಾಡಿರಿ. ಬಳಿಕ ಗೂಗಲ್‌ ಖಾತೆ ಲಿಂಕ್ ಅನ್ನು ಟ್ಯಾಪ್‌ ಮಾಡಿ. ನಂತರ ಗೂಗಲ್‌ ಖಾತೆಗಳ ಪೇಜ್‌ ತೆರೆದುಕೊಳ್ಳುತ್ತದೆ.

ಹಂತ 4 : ಅಲ್ಲಿ, ಪೇಮೆಂಟ್ಸ್‌ ಮತ್ತು ಸಬ್‌ಸ್ಕ್ರಿಪ್ಷನ್ಸ್‌ ಕ್ಲಿಕ್ ಮಾಡಿ > ನಂತರ Payment Info ಹೋಗಿ ಅಲ್ಲಿ, Manage Experience ಕ್ಲಿಕ್‌ ಮಾಡಿ.

ಹಂತ 5 : ನಂತರದಲ್ಲಿ ಪಾವತಿಗಳ ವಹಿವಾಟುಗಳು ಮತ್ತು ಆಕ್ಟಿವಿಟಿ ಆಯ್ಕೆಯಲ್ಲಿ Google Pay ವಹಿವಾಟುಗಳ ಲಿಸ್ಟ್‌ ಅನ್ನು ಕಾಣಬಹುದು.

ಹಂತ 6 : ಬಳಿಕ ವಹಿವಾಟಿನ ಪಕ್ಕದಲ್ಲಿರುವ ಕ್ರಾಸ್ ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ ಬಳಕೆದಾರರು ವೈಯಕ್ತಿಕ ಗೂಗಲ್‌ ಪೇ ವಹಿವಾಟಿನ ಹಿಸ್ಟರಿ ಡಿಲೀಟ್‌ ಮಾಡಬಹುದು.

ಹಂತ 7 : ಬಳಕೆದಾರರು ಗೂಗಲ್‌ ಪೇ ವಹಿವಾಟಿನ ಹಿಸ್ಟರಿಯನ್ನು ಬಲ್ಕ್ ಆಗಿಯೂ ಕೂಡಾ ಡಿಲೀಟ್ ಮಾಡಲು ಆಯ್ಕೆ ಇದೆ. ಬಳಕೆದಾರರು ಡಿಲೀಟ್ ಮಾಡಲು ಬಯಸುವ ಅವಧಿಯನ್ನು ಸೆಲೆಕ್ಟ್‌ ಮಾಡಿ, ಡಿಲೀಟ್‌ ಮಾಡಬಹುದು.


ಡೆಸ್ಕ್‌ಟಾಪ್‌ ಮೂಲಕ ಗೂಗಲ್‌ ಪೇ ವಹಿವಾಟು ಹಿಸ್ಟರಿ ಡಿಲೀಟ್ ಮಾಡಲು ಹೀಗೆ ಮಾಡಿ

ಹಂತ 1 : ಡೆಸ್ಕ್‌ಟಾಪ್‌ನಲ್ಲಿ https://myaccount.google.com/ ವೆಬ್‌ಸೈಟ್‌ ತೆರೆಯಿರಿ. ಬಳಿಕ ಪಾವತಿಗಳು ಮತ್ತು ಚಂದಾದಾರಿಕೆಗಳ ಆಯ್ಕೆ ಟ್ಯಾಪ್‌ ಮಾಡಿ.

ಹಂತ 2 : ನಂತರ Payment Info ಆಯ್ಕೆ ಅನ್ನು ಸರ್ಚ್ ಮಾಡಲು ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಪಾವತಿಗಳ ವಹಿವಾಟು ಮತ್ತು ಆಕ್ಟಿವಿಟಿ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ.

ಹಂತ 3 : ತದ ನಂತರ ಬಳಕೆದಾರರು ಗೂಗಲ್‌ ಪ್ಲೇ ವಹಿವಾಟುಗಳ ಲಿಸ್ಟ್‌ ಅನ್ನು ಕಾಣಬಹುದು. ಅಲ್ಲಿ ವಹಿವಾಟಿನ ಹಿಸ್ಟರಿಯನ್ನು ಡಿಲೀಟ್ ಮಾಡಬಹುದು.

ಹಂತ 4 : ಇನ್ನು ಬಲ್ಕ್‌ ಆಗಿ ಡಿಲೀಟ್ ಮಾಡಲು ಅವಕಾಶ ಇದೆ. ಇದಕ್ಕಾಗಿ ಡಿಲೀಟ್ ಆಯ್ಕೆ ಅನ್ನು ಟ್ಯಾಪ್‌ ಮಾಡಿ, ಡಿಲೀಟ್ ಮಾಡಲು ಬಯಸುವ ವಹಿವಾಟಿನ ಅವಧಿಯನ್ನು ಆಯ್ಕೆ ಮಾಡುವ ಮೂಲಕ ಬಲ್ಕ್‌ ಆಗಿ ಡಿಲೀಟ್ ಮಾಡಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries