ಕುಂಬಳೆ:ಸೂರಂಬೈಲು ಕಲಾರ್ಪಣಂ ಬಾಲಗೋಕುಲ ವಿದ್ಯಾರ್ಥಿಗಳಿಂದ 04.08.2024 ಆದಿತ್ಯವಾರ ಎಡನಾಡು ಗ್ರಾಮದ ಎಯ್ಯೂರು ಸತೀಶ ಭಟ್ಟರ ಗದ್ದೆಯಲ್ಲಿ ಕೆಸರುಗದ್ದೆ ಉತ್ಸವ ಜರಗಿತು. ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಸತೀಶ ಭಟ್ ಎಯ್ಯೂರು ಇವರನ್ನು ಪುತ್ತಿಗೆ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷೆ ಲಕ್ಷ್ಮಿ.ವಿ.ಭಟ್, ಸೂರಂಬೈಲು ಜೈಹಿಂದ್ ಕ್ಲಬ್ ಪದಾಧಿಕಾರಿಗಳು ಮತ್ತು ಬಾಲಗೋಕುಲ ಶಿಕ್ಷಕಿಯರು ಗೌರವಿಸಿದರು. ಬಾಲಗೋಕುಲ ವಿದ್ಯಾರ್ಥಿಗಳು ಮತ್ತು ರಕ್ಷಕರಿಗೆ ಕೆಸರು ಗದ್ದೆಯಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.