ಇಯರ್ ಬಡ್ ಕಂಪನಿ ಬೋಲ್ಟ್, ಅತ್ಯಾಧುನಿಕ ವೈರ್‌ಲೆಸ್ ತಂತ್ರಜ್ಞಾನ ಹೊಂದಿರುವ ಕ್ಲಾರಿಟಿ ಸರಣಿಯ ಟಿಡಬ್ಲ್ಯುಎಸ್ ಕ್ಲಾರಿಟಿ 1 ಮತ್ತು ಕ್ಲಾರಿಟಿ 3 ಇಯರ್ ಬಡ್‌ಗಳನ್ನು ಬಿಡುಗಡೆ ಮಾಡಿದೆ.
ಹೊಸ ಕ್ಲಾರಿಟಿ ಸರಣಿಯ ವೈರ್‌ಲೆಸ್ ಇಯರ್ ಬಡ್‌ಗಳನ್ನು ಅತ್ಯಾಧುನಿಕ ಫೀಚರ್‌ಗಳೊಂದಿಗೆ ಸ್ಪೆಷಲ್ ಆಡಿಯೊ ಅನುಭವ ಒದಗಿಸಲೆಂದೇ ಸಿದ್ಧಪಡಿಸಲಾಗಿದೆ.
ಡ್ಯುಯಲ್ ಡಿವೈಸ್ ಪೇರಿಂಗ್ (ಎರಡು ಡಿವೈಸ್‌ಗಳಿಗೆ ಕನೆಕ್ಟ್ ಮಾಡಬಹುದು) ಮತ್ತು ಬ್ಲೂ ಟೂತ್ 5.4 ಸೌಲಭ್ಯದಿಂದ ವೇಗವಾಗಿ ಕನೆಕ್ಟ್ ಆಗುತ್ತದೆ. ಅಬ್ಸಿಡಿಯನ್ ಬ್ಲ್ಯಾಕ್ ಮತ್ತು ಸ್ಮೋಕಿ ಮೆಟಲ್ ಬಣ್ಣಗಳಲ್ಲಿ ಪ್ರೀಮಿಯಂ ಗುಣಮಟ್ಟದ ಫಿನಿಶ್ ಜೊತೆಗೆ ಲಭ್ಯವಿದೆ.
ಬಾಸ್ ಹೆಚ್ಚಳಕ್ಕೆ 13 ಎಂಎಂ ಡ್ರೈವರ್ ಇರುವುದರಿಂದ ಗೇಮಿಂಗ್ ಅನುಭವ ಹೆಚ್ಚು ಮಾಡುವ ಎಸ್‌ಬಿಸಿ ಎಎಸಿ ಕೋಡೆಕ್ ಕಂಪಾಟಿಬಿಲಿಟಿ ಸೌಲಭ್ಯದಿಂದ ಮತ್ತು ಕಾಂಬ್ಯಾಟ್ ಗೇಮಿಂಗ್ ಮೋಡ್‌ನಲ್ಲಿ ಅಲ್ಟ್ರಾ ಲೋ 45 ಎಂಎಸ್ ಲೇಟೆನ್ಸಿ ಹೊಂದಬಹುದಾಗಿದೆ. ಇದರಿಂದ ಈ ಸಾಧನಗಳು ಗೇಮರ್‌ಗಳಿಗೆ ಇಷ್ಟವಾಗಲಿದೆ. ಐಪಿಎಕ್ಸ್ 5 ವಾಟರ್ ರೆಸಿಸ್ಟೆನ್ಸ್ ಸೌಲಭ್ಯ ಇದೆ. ಈ ಉತ್ಪನ್ನ ಭಾರತದಲ್ಲಿ ತಯಾರಾಗಿದೆ.
ಕ್ಲಾರಿಟಿ 1 ಟಿಡಬ್ಲ್ಯುಎಸ್ ಇಯರ್ ಬಡ್‌ಗಳು ತುಂಬಾ ಹಗುರವಾಗಿದ್ದು, ಎರಡೂ ಕಡೆಗಳಲ್ಲಿ ಸಮತೋಲಿತ ತೂಕ ಹೊಂದಿದ್ದು, ಆರಾಮದಾಯಕವಾಗಿ ಬಳಸಬಹುದಾಗಿದೆ. ಪ್ರೊಕ್ರೇನಿಯಮ್ ಮೆಟಲ್ ಬಾಡಿ ಹೊಂದಿರುವ ಇದು ಲಿಕ್ವಿಡ್ ಮೆಟಲ್ ಶೈಲಿಯಲ್ಲಿದೆ. ಜೊತೆಗೆ, ಉತ್ತಮ ಬಾಳಿಕೆ ಬರುತ್ತದೆ. ಕ್ಲಾರಿಟಿ 1 ಸೂಕ್ತವಾದ ವಾಯ್ಸ್ ಅಸಿಸ್ಟೆಂಟ್ ಜೊತೆ ಸುಲಭವಾಗಿ ಹೊಂದಿಕೊಂಡು ಕಾರ್ಯ ನಿರ್ವಹಿಸುತ್ತದೆ.
ಡ್ಯುಯಲ್ ಡಿವೈಸ್ ಕನೆಕ್ಟಿವಿಟಿ ಸೌಲಭ್ಯದಿಂದ ಏಕಕಾಲದಲ್ಲಿ ಎರಡು ಸಾಧನಗಳಿಗೆ ಇದನ್ನು ಕನೆಕ್ಟ್ ಮಾಡಬಹುದು. 80 ಗಂಟೆಗಳ ಬ್ಯಾಟರಿ ಬಾಳಿಕೆ ಬರಲಿದ್ದು, ಪದೇ ಪದೇ ಚಾರ್ಜ್ ಮಾಡುವ ಅಗತ್ಯವಿಲ್ಲ. ವೇಗದ ಚಾರ್ಜಿಂಗ್ ತಂತ್ರಜ್ಞಾನ ಹೊಂದಿರುವುದರಿಂದ ಕೇವಲ 10 ನಿಮಿಷ ಚಾರ್ಜ್ ಮಾಡಿದರೆ 180 ನಿಮಿಷಗಳ ಪ್ಲೇ ಟೈಮ್ ಸಿಗುತ್ತದೆ.
'ಬೋಲ್ಟ್‌ನಲ್ಲಿ ಉತೃಷ್ಟ ಉತ್ಪನ್ನಗಳನ್ನು ನೀಡಿ ಆಡಿಯೊ ತಂತ್ರಜ್ಞಾನ ಕ್ಷೇತ್ರವನ್ನು ಬದಲಿಸಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತೇವೆ. ಕ್ಲಾರಿಟಿ ಸರಣಿಯನ್ನು ಬಿಡುಗಡೆ ಮಾಡುವುದರ ಮೂಲಕ ವಿಶಿಷ್ಟ ಆಡಿಯೊ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದೇವೆ. ಸಂಗೀತ ಪ್ರಿಯರಿಗೆ ಮತ್ತು ಗೇಮರ್‌ಗಳಿಗೆ ಬೇಕಾದಂತೆ ಈ ಉತ್ಪನ್ನವನ್ನು ವಿನ್ಯಾಸ ಮಾಡಿದ್ದು, ಕ್ಲಾರಿಟಿ ಸರಣಿ ಅವರ ಆಡಿಯೊ ಅನುಭವ ಹೆಚ್ಚಿಸಲಿದೆ ಎಂಬ ವಿಶ್ವಾಸ ಇದೆ' ಎಂದು ಬೋಲ್ಟ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ವರುಣ್ ಗುಪ್ತಾ ಹೇಳಿದ್ದಾರೆ.
ಬೆಲೆ
ಕ್ಲಾರಿಟಿ 3 ಅಬ್ಸಿಡಿಯನ್ ಬ್ಲ್ಯಾಕ್ ಮತ್ತು ಸ್ಮೋಕಿ ಮೆಟಲ್ ₹1,999 ಇದೆ
ಕ್ಲಾರಿಟಿ 2 ಅಕ್ವಾಮರೀನ್, ಮಿಡ್ನೈಟ್ ಬ್ಲ್ಯಾಕ್ ಮತ್ತು ಸ್ಕೈಲೈನ್ ಗ್ರೇ ₹999 ಇದೆ.