ಕೋಲ್ಕತ್ತ: 'ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪೊಲೀಸ್ ಆಯುಕ್ತ ವಿನಿತ್ ಗೋಯಲ್ ಅವರನ್ನು ಸಿಬಿಐ ಸುಳ್ಳು ಪತ್ತೆ(ಪಾಲಿಗ್ರಾಫ್) ಪರೀಕ್ಷೆಗೆ ಒಳಪಡಿಸಬೇಕು' ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಭಾಟಿಯಾ, 'ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಮಮತಾ ಬ್ಯಾನರ್ಜಿ ರಕ್ಷಿಸುತ್ತಿದ್ದಾರೆ.
'ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಘಟನೆಗಳು ಆತಂಕಕಾರಿಯಾಗಿವೆ. ಸಂವಿಧಾನವನ್ನು ಚೂರು ಚೂರು ಮಾಡುವಂತಿದೆ. ಈ ದೇಶದಲ್ಲಿ ವೈದ್ಯರಿದ್ದರೆ ಅದು ಮಮತಾ ಬ್ಯಾನರ್ಜಿ ಒಬ್ಬರೇ ಎನ್ನುವಂತಿದೆ' ಎಂದು ಕಿಡಿಕಾರಿದರು.
'ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಯನ್ನು ಈ ಹಿಂದೆ ಆತ್ಮಹತ್ಯೆ ಎಂದು ಹೇಳಿರುವ ಪೊಲೀಸ್ ಆಯುಕ್ತ ವಿನಿತ್ ಗೋಯಲ್ ಈ ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು' ಎಂದು ಒತ್ತಾಯಿಸಿದರು.
'ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ. ಸತ್ಯ ಹೊರಬರಬೇಕಾದರೆ ಮಮತಾ ಬ್ಯಾನರ್ಜಿ ಮತ್ತು ಪೊಲೀಸ್ ಆಯುಕ್ತ ವಿನಿತ್ ಗೋಯಲ್ ಅವರ ಸುಳ್ಳು ಪತ್ತೆ ಪರೀಕ್ಷೆಯನ್ನು ನಡೆಸಬೇಕು' ಎಂದು ಹೇಳಿದರು.
ಇದೇ ವೇಳೆ 'ನಬನ್ನ ಅಭಿಜಾನ್' ರ್‍ಯಾಲಿ ನಡೆಸುತ್ತಿರವವರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದನ್ನು ತೀವ್ರವಾಗಿ ಖಂಡಿಸಿದರು.