HEALTH TIPS

ಕಾವಲುಗಾರ ಕೊಠಡಿಯೊಳಗಿದ್ದಂತೆ ಬ್ಯಾಂಕ್ ಗೆ ನುಗ್ಗಿ ಕಳವಿಗೆ ಯತ್ನ, ಗ್ರಿಲ್ಸ್ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆ

           ಕುಂಬಳೆ: ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ಪೆರುವಾಡ್ ಶಾಖೆಯ ಕಿಟಿಕಿ ಗ್ರಿಲ್ಸ್ ವಿದ್ಯುತ್ ಕಟ್ಟರ್ ಬಳಸಿ ತುಂಡರಿಸಿ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿದ್ದಾರೆ. ರಾಷ್ಟಿçÃಯ ಹೆದ್ದಾರಿ ಪೆರುವಾಡ್‌ನ ಬಹು ಅಂತಸ್ತಿನ ಕಟ್ಟಡದ ತಳಭಾಗದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಶಾಖಾ ಕೊಠಡಿಯ ಹಿಂಭಾಗದ ಗ್ರಿಲ್ಸ್ ತುಂಡರಿಸಿ ನುಗ್ಗಿ ಕಳವಿಗೆ ಯತ್ನಿಸಲಾಗಿದೆ. 

            ಬ್ಯಾಂಕ್ ಕಾವಲುಗಾರ ಕೊಠಡಿಯಲ್ಲಿ ಮಲಗಿ ನಿದ್ರಿಸುತ್ತಿದ್ದಂತೆ ಕಳವಿಗೆ ಯತ್ನಿಸಲಾಗಿದೆ.  ಇಲೆಕ್ಟಾçನಿಕ್ ಕಟ್ಟರ್‌ಗೆ ಬ್ಯಾಂಕ್‌ನಿAದಲೇ ವಿದ್ಯುತ್ ಸಂಪರ್ಕ ಪಡೆದು, ಗ್ರಿಲ್ಸ್ ತುಂಡರಿಸಿ ನುಗ್ಗಲಾಗಿದೆ. ಬ್ಯಾಂಕಿನ ಹೊರಗೆ ಹಾಗೂ ಒಳಭಾಗದಲ್ಲಿ ಖಾರದ ಪುಡಿಯನ್ನು ಚೆಲ್ಲಿದ ಸ್ಥಿತಿಯಲ್ಲಿದೆ.  ಶ್ವಾನದಳಕ್ಕೆ ಮಾಹಿತಿ ಸಿಗದಂತೆ ಮಾಡಲು ಈ ತಂತ್ರ ಅನುಸರಿಸಿರಬೇಕೆಂದು ಸಂಶಯಿಸಲಾಗಿದೆ. ಒಳ ತೆರಳಿದ್ದರೂ, ಬ್ಯಾಂಕಿನಿAದ ಯಾವುದೇ ಕಳವು ನಡೆಸಲಾಗದೆ ಕಳ್ಳರು ವಾಪಸಾಗಿದ್ದಾರೆ. ಕಿಟಿಕಿ ಗ್ರಿಲ್ಸ್ ತುಂಡರಿಸಿದ ಜಾಗಕ್ಕೆ ಫ್ಲೆಕ್ಸ್ ಬೋರ್ಡೊಂದನ್ನು ಅಡ್ಡ ಇರಿಸಿ ಕಳ್ಳರ ತಂಡ ಪರಾರಿಯಾಗಿದೆ. 

           ಕುಂಬಳೆ ಠಾಣೆ ಇನ್ಸ್ಪೆಕ್ಟರ್ ಕೆ.ಪಿ ವಿನೋದ್ ನೇತೃತ್ವದ ಪೊಲೀಸರ ತಂಡ, ಶ್ವಾನ, ಬೆರಳಚ್ಚು ತಂಡ ಸ್ಥಳಕ್ಕಾಗಮಿಸಿ  ಮಾಹಿತಿ ಸಂಗ್ರಹಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries