ಮಧೂರು: ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನವೀಕರಣ ಬ್ರಹ್ಮಕಲಶೋತ್ಸವ ಹಾಗು ಮೂಡಪ್ಪ ಸೇವೆ 2025 ಮಾರ್ಚ್ 27 ರಿಂದ ಎಪ್ರಿಲ್ 7 ರ ವರೆಗೆ ನಡೆಯಲಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ಕಾಸರಗೋಡು ನಗರಸಭಾ ವ್ಯಾಪ್ತಿಯ ಪ್ರಾದೇಶಿಕ ಸಮಿತಿ ಸಭೆ ಆ.10 ರಂದು ಸಂಜೆ 5 ಗಂಟೆಗೆ ಬ್ಯಾಂಕ್ ರಸ್ತೆಯಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರಗಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.