ತಿರುವನಂತಪುರಂ : ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮಲಯಾಳಿ ಯೂಟ್ಯೂಬರ್ ವಿಜೆ ಮಚಾನ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ವಿಜೆ ಮಚಾನ್ ಎಂಬ ಚಾನೆಲ್ ನ ಯೂಟ್ಯೂಬರ್ ಗೋವಿಂದ್ ವಿಜಯ್ (30) ವಿರುದ್ಧ ಪೊಲೀಸರು ಈ ಸಂಬಂಧ ಎಫ್‌ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ.
ಸಂತ್ರಸ್ತ ಅಪ್ರಾಪ್ತೆ ಆಗಸ್ಟ್ 23 ರಂದು ಕಲಮಸ್ಸೆ ಪೊಲೀಸರಿಗೆ ದೂರು ನೀಡಿದ್ದು, ಅದೇ ದಿನ ಪೊಲೀಸರು ಆತನನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಅಲಪ್ಪುಳ ಜಿಲ್ಲೆಯ ಮನ್ನಾರ್‌ನಲ್ಲಿರುವ ಆರೋಪಿಯ ಮನೆಯಿಂದ ಆತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಆರೋಪಿ ಗೋವಿಂದ್ ಗೆ ಸಾಮಾಜಿಕ ಮಾಧ್ಯಮದ ಮೂಲಕ 16 ವರ್ಷದ ಯುವತಿಯ ಪರಿಚಯವಾಗಿತ್ತು. ಆ ಬಳಿಕ ಆತನು ಮೇ ತಿಂಗಳಲ್ಲಿ ಬಾಲಕಿಯನ್ನು ರೆಸಾರ್ಟ್‌ಗೆ ಕರೆದೊಯ್ದಿದ್ದಾನೆ. ಅಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆ ಎನ್ನಲಾಗಿದೆ.
YouTube ಚಾನಲ್, VJ MACHAN, 1,29,000 ಚಂದಾದಾರರನ್ನು ಹೊಂದಿದೆ. Instagram ನಲ್ಲಿ ಸುಮಾರು 1,06,000 ಫಾಲೋವರ್ ಗಳಿದ್ದಾರೆ ಎಂದು ತಿಳಿದು ಬಂದಿದೆ.
ಗೋವಿಂದ್ ತಮ್ಮ ವ್ಲಾಗ್‌ಗಳ ಮೂಲಕ ಸ್ತ್ರೀದ್ವೇಷದ ಹೇಳಿಕೆಗಳನ್ನು ನೀಡುತ್ತಾ ಸದಾ ಸುದ್ದಿಯಲ್ಲಿರುತ್ತಾನೆ. ಇತ್ತೀಚಿನ ಆತನು ತನ್ನ ಮಹಿಳೆಯರ ಬಗ್ಗೆ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದನು.
ಆರೋಪಿಯು ತನ್ನ ಚಾನೆಲ್‌ನಲ್ಲಿ ಆಗಾಗ್ಗೆ ಮಹಿಳೆಯರ ಬಗ್ಗೆ ಅವಹೇಳನ ಮಾಡುವ ಕೆಲಸದಲ್ಲಿ ಹೆಚ್ಚು ತೊಡುತ್ತಾನೆ. ಇತ್ತೀಚೆಗೆ ಒಂದು ವೀಡಿಯೋದಲ್ಲಿ ಮಹಿಳೆಯರು ರೆಸ್ಟೋರೆಂಟ್‌ಗಳು, ನೈಟ್‌ಕ್ಲಬ್‌ಗಳಿಂದ ಒಳಗೆ ಮತ್ತು ಹೊರಗೆ ಹೋಗುತ್ತಿರುವುದನ್ನು ಅವರ ಒಪ್ಪಿಗೆಯಿಲ್ಲದೆ ಚಿತ್ರೀಕರಿಸಿದ್ದ. ಬಳಿಕ ಅವರದ್ದು 'ಲೈಂಗಿಕ ಅಶ್ಲೀಲ ಸ್ವಭಾವ' ಎಂದು ಸೂಚಿಸುವ ಕೀಳು ಮಟ್ಟದ ಹಿನ್ನಲೆ ಧ್ವನಿಯೊಂದಿಗೆ ಅದನ್ನು ಪ್ರಸಾರ ಮಾಡಿದ್ದ.
ಇನ್ನೊಂದು ವಿಡಿಯೋದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಪ್ರಪೋಸ್ ಮಾಡಿ, ತನ್ನೊಂದಿಗೆ ಬೈಕ್ ರೈಡ್ ಮಾಡಲು ಬರುತ್ತೀರಾ ಎಂದು ಕೇಳುತ್ತಿದ್ದ. ಬಳಿಕ ಅದನ್ನು ಪ್ರಾಂಕ್ ಎಂದು ತಮಾಷೆ ಮಾಡುತ್ತಿದ್ದ.
ಈಗ ಮಚಾನ್ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಆಗಸ್ಟ್ 23 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.