ಕಾಸರಗೋಡು: ಜಗತ್ತಿಗೆ ಮಾರ್ಗದರ್ಶಕನಾದ ಶ್ರೀ ಕೃಷ್ಣ ಪರಮಾತ್ಮ ತನ್ನ ಲೀಲೆಗಳ ಮೂಲಕ ಸಮಾಜದ ಅಂಕಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದನು ಎಂದು ಧರ್ಮಸ್ಥಳ ಮೇಳದ ಪ್ರಧಾನ ಭಾಗವತ, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಹೇಳಿದರು.
ಅವರು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜರಗಿದ ಅಷ್ಟಮಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ದೇವಸ್ಥಾನದ ಅನುವಂಶಿಕ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿದರು. ಡಾ.ಉದಯ ಕುಮಾರ್ ಕೂಡ್ಲು ಬಳಗದವರಿಂದ ಸ್ಯಾಕ್ಸೋಪೋನ್ ವಾದನ, ಪ್ರಸಿದ್ಧ ಕಲಾವಿದರಿಂದ ಯಕ್ಷ ಗಾನಾರ್ಚನೆ ನಡೆಯಿತು. ಊರಿನ ವಿವಿಧ ಭಾಗಗಳಿಂದ ಮುದ್ದು ಕೃಷ್ಣ ರಾಧೆ ವೇಷಧಾರಿಗಳ ಆಕರ್ಷಕ ಮೆರವಣಿಗೆ ಮೂಲಕ ಸಾಗಿ ಬಂದು ದೇವಸ್ಥಾನದಲ್ಲಿ ವೇಷ ಪ್ರದರ್ಶನ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಮಾಲತಿ ಜಗದೀಶ್ ಸ್ವಾಗತಿಸಿ, ವೇಣುಗೊಪಾಲ್ ಮಾಸ್ತರ್ ಕೂಡ್ಲು ವಂದಿಸಿದರು. ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.