ಕಾಸರಗೋಡು: ಇನ್‍ಸ್ಟಾಗ್ರಾಮ್ ಮೂಲಕ ಪರಿಚಯಮಾಡಿಕೊಂಡು, ನಂತರ ಹನಿಟ್ರಾಪ್‍ನಲ್ಲಿ ಸಿಲುಕಿಸಿ ಯುವಕನಿಂದ ಚಿನ್ನ ಮತ್ತು ಹಣ ವಸೂಲಿಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತೆಯಾಗಿರುವ ಚೆಮ್ನಾಡ್ ಕೊಂಬನಡ್ಕ ನಿವಾಸಿ ಶ್ರುತಿ ಚಂದ್ರಶೇಖರ್ ಎಂಬಾಕೆ ವಿರುದ್ಧ ಮತ್ತೆ ಮೂರು ಕೇಸು ದಾಖಲಾಗಿದೆ.
ಪುಲ್ಲೂರ್‍ಪೆರಿಯ, ಹೊಸದುರ್ಗ ನಿವಾಸಿಗಳಾಗಿರುವ ಇಬ್ಬರು ಯುವಕರು ಹಾಗೂ ಕೊಲ್ಲಂನ 33ರ ಹರೆಯದ ಮಹಿಳೆಯೊಬ್ಬರ ಪ್ರತ್ಯೇಕ ದೂರಿನ ಮೇರೆಗೆ ಒಟ್ಟು ಮೂರು ಕೇಸು ವಿವಿಧ ಠಾನೆಗಳಲ್ಲಿ ದಾಖಲಾಗಿದೆ.
ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪ್ರಕರಣವೊಂದಕ್ಕೆ ಸಂಬಂಧಿಸಿ ಉಡುಪಿಯಲ್ಲಿ ತಲೆಮರೆಸಿಕೊಂಡು ವಾಸಿಸುತ್ತಿದ್ದ ಈಕೆಯನ್ನು ಮೇಲ್ಪರಂಬ ಠಾಣೆ ಪೊಲೀಸರು ಅಲ್ಲಿನ ಪೊಲೀಸರ ನೆರವಿನಿಂದ ಇತ್ತೀಚೆಗೆ ಬಂಧಿಸಿದ್ದರು. ಇದುವರೆಗೆ ಒಟ್ಟು ಐದು ಕೇಸು ಈಕೆ ವಿರುದ್ಧ ದಾಖಲಾಗಿದೆ.